ಮಗಧೀರ ವಿಲನ್ ಈಗ ಹೀರೋ- ದೇವ್ ಗಿಲ್ ನಟನೆಯ ‘ಅಹೋ ವಿಕ್ರಮಾರ್ಕ’ ಚಿತ್ರದ ಸಾಂಗ್ ರಿಲೀಸ್

Public TV
2 Min Read

ತೆಲುಗು ಚಿತ್ರರಂಗದ ಸೂಪರ್ ಹಿಟ್ ‘ಮಗಧೀರ’ (Magadheera) ಸಿನಿಮಾದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಅಹೋ ವಿಕ್ರಮಾರ್ಕ’ ಸಿನಿಮಾದಲ್ಲಿ ದೇವ್ ಗಿಲ್ (Dev Gill) ನಾಯಕನಟನಾಗಿ ನಟಿಸಿದ್ದಾರೆ.

‘ಅಹೋ ವಿಕ್ರಮಾರ್ಕ’ ಪ್ರಚಾರಕ್ಕಾಗಿ ದೇವ್ ಗಿಲ್ ಬೆಂಗಳೂರಿಗೆ ಆಗಮಿಸಿದ್ದರು. ನಗರ ಊರ್ವಶಿ ಚಿತ್ರ ಮಂದಿರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ‘ಮೀನಾಕ್ಷಿ ಸಾಂಗ್’ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur) ಮಾತನಾಡಿ, ದೇವ್ ಗಿಲ್ ಸ್ಕ್ರಿನ್‌ನಲ್ಲಿ ನೋಡಿದಾಗ ಭಯವಾಗುತ್ತಿತ್ತು. ನಮ್ಮ ಮನೆಗೆ ಬಂದಾಗ ಅವರ ಸರಳತೆ ಹಾಗೂ ವಿನಯತೆ ನನಗೆ ಇಷ್ಟವಾಯ್ತು. ಒಂದು ಸಿನಿಮಾದಿಂದ 3ರಿಂದ 4 ಸಾವಿರ ಕುಟುಂಬ ಬದುಕುತ್ತಾರೆ. ಅವರು ಬಂದು ನಾವು ವಿಭಿನ್ನ ರೀತಿಯಲ್ಲಿ ಟ್ರೈ ಮಾಡಿದ್ದೇವೆ. ನಿಮ್ಮ ಸಪೋರ್ಟ್ ಬೇಕು ಎಂದಾಗ ಇದರಿಂದ ಒಂದಷ್ಟು ಜನ ಬದುಕುತ್ತಾರೆ. ಇದಕ್ಕೆ ದಾರಿಯಾಗಲು ನಾನು ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದೇನೆ. ಸಿನಿಮಾ ಮೇಲೆ ಅವರಿಗೆ ತುಂಬಾನೇ ಪ್ರೀತಿ ಇದೆ. ಥಿಯೇಟರ್‌ನಲ್ಲಿ ‘ಅಹೋ ವಿಕ್ರಮಾರ್ಕ್’ ಚಿತ್ರ ಬೇರೆ ರೀತಿಯ ಅನುಭವ ನೀಡಲಿದೆ ಎಂದರು.

ದೇವಗಿಲ್ ಮಾತನಾಡಿ, ಮೊದಲಿನಿಂದಲೂ ನಮ್ಮ ಸಿನಿಮಾಗಳಿಗೆ ಬೆಂಬಲ ನೀಡುತ್ತಿದ್ದೀರಾ. ಈಗ ‘ಅಹೋ ವಿಕ್ರಮಾರ್ಕ’ ಚಿತ್ರಕ್ಕೂ ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು. ಇದನ್ನೂ ಓದಿ:ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಮದುವೆ ಆಮಂತ್ರಣ ನೀಡಿದ ‘ಕಾಟೇರ’ ಡೈರೆಕ್ಟರ್

ನಟ ದೇವಗಿಲ್‌ಗೆ ನಾಯಕಿಯಾಗಿ ಚಿತ್ರ ಶುಕ್ಲಾ ನಟಿಸಿದ್ದಾರೆ. ಸಾಂಗ್‌ನಲ್ಲಿ ಹೀರೋ ಜೊತೆ ಚಿತ್ರ ಶುಕ್ಲಾ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು, ಮನೀಶ್ ದಿನಕರ್ ಧ್ವನಿಯಾಗಿದ್ದಾರೆ. ‘ಅಹೋ ವಿಕ್ರಮಾರ್ಕ’ ಸಿನಿಮಾಗೆ ನಿರ್ದೇಶಕ ತ್ರಿಕೋಟಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಪ್ರವೀಣ್ ತಾರ್ಡೆ, ತೇಜಸ್ವಿನಿ ಪಂಡಿತ್, ಪೋಸಾನಿ ಮುರಳಿ ಕೃಷ್ಣ, ಬಿಟ್ಟಿರಿ ಸತ್ತಿ, ಸಯಾಜಿ ಶಿಂಧೆ, ಕಾಲಕೇಯ ಪ್ರಭಾಕರ್, ವಿಕ್ರಮ್ ಶರ್ಮಾ ತಾರಾಬಳಗದಲ್ಲಿದಲ್ಲಿದ್ದಾರೆ. ಆರತಿ ದೇವಿಂದರ್ ಗಿಲ್, ಮೀಹಿರ್ ಕುಲಕರ್ಣಿ, ಅಶ್ವಿನಿ ಕುಮಾರ್ ಮಿಶ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Share This Article