ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿದ್ದ ಖ್ಯಾತ ಗಾಯಕಿ ಮಡೋನಾ ಆರೋಗ್ಯದಲ್ಲಿ ಚೇತರಿಕೆ

Public TV
2 Min Read

ವಾಷಿಂಗ್ಟನ್: ಯುಎಸ್‌ನ ಖ್ಯಾತ ಗಾಯಕಿ (American Singer) ಮಡೋನಾ (Madonna) ಗಂಭೀರ ಬ್ಯಾಕ್ಟೀರಿಯಾ ಸೋಂಕಿನಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ದಿನಗಳ ವರೆಗೆ ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು ICUನಿಂದ ಬಿಡುಗಡೆ ಹೊಂದಿರುವುದಾಗಿ ಅವರ ಮ್ಯಾನೇಜರ್ ಗೈ ಓಸಿಯಾರಿ ತಿಳಿಸಿದ್ದಾರೆ.

ಮಡೋನಾ ಅವರ ಆರೋಗ್ಯದಲ್ಲಿ (Health) ಈಗ ಸುಧಾರಣೆ ಕಂಡುಬರುತ್ತಿದೆ. ಅವರು ಇನ್ನೂ ವೈದ್ಯರ ಆರೈಕೆಯಲ್ಲಿದ್ದು (Medical Care), ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್ʼ

ಗಾಯಕಿ ತನ್ನ ಸಂಗೀತ ವೃತ್ತಿ ಜೀವನದ 40ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ವರ್ಷದ ಆರಂಭದಲ್ಲಿ ಸೆಲೆಬ್ರೇಶನ್ ಪ್ರವಾಸ ಘೋಷಿಸಿದ್ದರು. ಜುಲೈ 15ರಂದು ಕೆನಡಾದ ವ್ಯಾಂಕೋವರ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಪ್ರವಾಸದಲ್ಲಿ ಜ್ಯಾಕ್ ಬ್ಲ್ಯಾಕ್, ಜುಡ್ ಅಪಾಟೊವ್, ಲಿಲ್ ವೇಯ್ನ್, ಆಮಿ ಶುಮರ್ ಸೇರಿದಂತೆ ಇನ್ನಿತರ ಪ್ರಮುಖ ಗಾಯಕರು ಪಾಲ್ಗೊಳ್ಳುವುದರಲ್ಲಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದರಿಂದ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಏಕೆಂದರೆ ಇಂತಹ ಸಂದರ್ಭಗಳಲ್ಲಿ ಪ್ರವಾಸಗಳಿಗೆ ವಿರಾಮ ನೀಡುವುದು ಸೂಕ್ತ. ಪ್ರವಾಸದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮ್ಯಾನೇಜರ್ ಹೇಳಿದ್ದಾರೆ.

ʻಲೈಕ್ ಎ ವರ್ಜಿನ್’ ಸೇರಿದಂತೆ 7 ಬಾರಿ ಗ್ರ‍್ಯಾಮಿ ಪ್ರಶಸ್ತಿ ವಿಜೇತರೂ ಆಗಿರುವ ಮಡೋನಾ ಖ್ಯಾತ ಸಂಗೀತ ಗಾಯಕರಲ್ಲಿ ಒಬ್ಬರಾಗಿದ್ದಾರೆ. 2020 ರಲ್ಲಿ `ಮೇಡಮ್ ಎಕ್ಸ್’ ಪ್ರವಾಸದಲ್ಲಿ ಉಂಟಾದ ಅಪಘಾತದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನೂ ಓದಿ: ನೈಟ್ ಶೂಟ್ ಗಾಗಿ ಶೇಷಾಚಲಂಗೆ ಬಂದಿಳಿದ ರಶ್ಮಿಕಾ ಮಂದಣ್ಣ

1958ರಲ್ಲಿ ಜನಿಸಿದ ಮಡೋನಾ 1977ರಲ್ಲಿ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದರು. ಆಗ ಆಕೆಯ ಬಳಿ ಇದ್ದದ್ದು ಕೇವಲ 35 ಡಾಲರ್ ಮಾತ್ರ. ಬದುಕು ಕಟ್ಟಿಕೊಳ್ಳಲು ನಗ್ನ ಮಾಡೆಲಿಂಗ್ ನಿಂದ ಹಿಡಿದು ಬೇಕರಿ ತಿನಿಸು ಮಾರಾಟ ಮಾಡುವ ಎಲ್ಲ ಕೆಲಸಗಳನ್ನೂ ಮಾಡುತ್ತಾ ಜೀವನ ಕಟ್ಟಿಕೊಂಡರು. 1982ರಲ್ಲಿ ರಿಲೀಸ್ ಆದ `ಎವೆರಿಬಡಿ’ ನಂತರ ರಿಲೀಸ್ ಆದ ʻಲಕ್ಕಿ ಸ್ಟಾರ್’ ʻಬಾರ್ಡರ್‌ಲೈನ್’ ಹಾಗೂ `ಹಾಲಿಡೇ’ ಸಾಂಗ್ಸ್ಗಳು ಅವರನ್ನ ಸ್ಟಾರ್ ಹಾದಿಯತ್ತ ಕೊಂಡೊಯ್ದವು. 1984ರಲ್ಲಿ ಬಿಡುಗಡೆಯಾದ ?ಲೈಕ್ ಎ ವರ್ಜಿನ್’ ಆಲ್ಬಂಬ್ ಸಾಂಗ್ ಮಡೋನಾರನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುವಂತೆ ಮಾಡಿತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್