ವಿದ್ಯಾರ್ಥಿನಿಯ ಹತ್ಯೆಗೈದವ ಆತ್ಮಹತ್ಯೆ ಮಾಡಿಕೊಂಡಿಲ್ಲ: ಎಸ್‍ಪಿ ಸ್ಪಷ್ಟನೆ

Public TV
1 Min Read

ಮಡಿಕೇರಿ: ಸೋಮವಾರಪೇಟೆ (Somavarpet) ತಾಲೂಕಿನ ಸೂರ್ಲುಬ್ಬಿ ಗ್ರಾಮದಲ್ಲಿ ನಡೆದಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯ (SSLC Student) ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಸುಳ್ಳು ಎಂದು ಕೊಡಗು (Kodagu) ಎಸ್‍ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಆರೋಪಿ ಪ್ರಕಾಶ್ ಕಾಡಿನಲ್ಲಿ ತಲೆಮರೆಸಿಕೊಂಡಿದ್ದು, ಆ ಭಾಗದಲ್ಲಿ ನೆಟ್‍ವರ್ಕ್ ಇಲ್ಲದ ಕಾರಣ ತಪ್ಪು ಮಾಹಿತಿ ಹರಿದಾಡಿದೆ. ಪೆÇಲೀಸರಿಗೆ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಯಾರೋ ಸ್ಥಳೀಯರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ SSLC ವಿದ್ಯಾರ್ಥಿನಿಯ ತಲೆ ಕತ್ತರಿಸಿ ಬರ್ಬರ ಕೊಲೆ!

ಆರೋಪಿ ಕೋವಿ ಹಿಡಿದುಕೊಂಡು ಕಾಡಿಗೆ ತೆರಳಿದ್ದು, ಆತನ ಮನಸ್ಥಿತಿ ಸರಿಯಿಲ್ಲದ ಕಾರಣ ರಾತ್ರಿ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಎಂದು ಆರೋಪಿಯ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ಶನಿವಾರ ಬೆಳಗ್ಗೆ ಆರೋಪಿ ಹಾಗೂ ಬಾಲಕಿಯ ತಲೆ ಭಾಗದ ಹುಡುಕಾಟ ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್‌ಗೆ 12 ಮಾವೋವಾದಿಗಳು ಬಲಿ

Share This Article