ಚಿಕ್ಕಪ್ಪನ ಜೊತೆಗೆ ಅನೈತಿಕ ಸಂಬಂಧ- ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದವಳು ಬರ್ಬರವಾಗಿ ಹೆಣವಾದ್ಳು!

Public TV
3 Min Read

– ಸೇತುವೆ ಮೇಲಿಂದ ತಳ್ಳಿ, ಬಿದ್ದಲ್ಲಿಂದ ಎಳೆದೊಯ್ದು ರೇಪ್ ಮಾಡಿ ಕೊಲೆ
– ಗ್ರಾಮಪಂಚಾಯ್ತಿ ಸದಸ್ಯೆಯ ಭೀಕರ ಮರ್ಡರ್

ಮಡಿಕೇರಿ: ಆಕೆ ಪಂಚಾಯ್ತಿ ಸದಸ್ಯೆ. ಹೊಳೆಯಿಂದ ಆಚೆಯಲ್ಲಿರುವ ಸಂಬಂಧಿಯೊಬ್ಬರ ಮಗುವಿನ ಹುಟ್ಟಿದ ಹಬ್ಬದ ಆಚರಣೆಗೆಂದು ಸಂಜೆ ಮಬ್ಬುಗತ್ತಲಲ್ಲಿ ಹೊರಟಿದ್ದಳು. ಅಷ್ಟರಲ್ಲೇ ಹೊಳೆಯ ಸೇತುವೆ ಮೇಲೆ ಬಂದಿದ್ದ ಕಿರಾತಕ ಆಕೆಯನ್ನು ಹಿಡಿದು ಎಳೆದಾಡಿ ಹೊಳೆಗೆ ದೂಡಿದ್ದ. ಬೆಳಗೆದ್ದು ನೋಡುವಷ್ಟರಲ್ಲಿ ಮಹಾಬೆಟ್ಟದ ತುತ್ತ ತುದಿಯಲ್ಲಿ ಮಹಿಳೆ ಜೊತೆಗೆ ಆ ಕಿರಾತಕನೂ ಮರವೊಂದರಲ್ಲಿ ಶವವಾಗಿ ನೇತಾಡಿದ್ದ.

ಹೌದು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯ್ತಿ ರಾಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಂಬಂಧಿಕರ ಮಗುವಿನ ಹುಟ್ಟುಹಬ್ಬಕ್ಕೆ ಅಂತ ಹೋದ ಪತ್ನಿ ಹೆಣವಾಗಿ ಮರದಲ್ಲಿ ನೇತಾಡುತ್ತಿರುವುದನ್ನು ನೋಡಿ ಪತಿ ಕೇಶವ ಕಣ್ಣೀರಾಕಿದ್ದಾರೆ. ಪತಿಯ ಗೋಳಾಟ ಕಂಡು ಅಯ್ಯೋ ಪಾಪ, ಹೇಗೋ ಗಾರೆ ಕೆಲಸ ಮಾಡಿಕೊಂಡು, ಇದ್ದ ಒಂದಷ್ಟು ಭೂಮಿಯಲ್ಲಿ ದುಡಿದು ತಿನ್ನುತ್ತಿದ್ದ ಈತನಿಗೆ ಹೀಗಾಗಬಾರದಿತ್ತು ಎಂದು ಜನ ಮರುಗಿದ್ದಾರೆ. ಆದರೆ ಈ ಪಾಪಿ ಇಂತಹ ಕೆಲಸ ಮಾಡಿದನಲ್ಲ ಎಂದು ಸತ್ತು ಹೆಣವಾಗಿ ನೇತಾಡುತ್ತಿರುವವನಿಗೂ ಅಲ್ಲಿ ನೆರೆದಿದ್ದ ಜನರು ಹಿಡಿ ಶಾಪ ಹಾಕಿದ್ದಾರೆ.

ಅಷ್ಟಕ್ಕೂ ಗ್ರಾಮ ಪಂಚಾಯ್ತಿ ಸದಸ್ಯೆ ಕಮಲಳನ್ನು ಕೊಂದಿದ್ದಾರೂ ಯಾಕೆ ಎಂದು ಪ್ರಶ್ನಿಸಿದರೆ ಒಂದೊಂದೇ ಸುಳಿವು ಬಿಚ್ಚಿಕೊಳ್ಳುತ್ತವೆ. ಅಷ್ಟಕ್ಕೂ ಕಮಲಳನ್ನು ಹೀಗೆ ಹೀನಾಯವಾಗಿ ಸಾಯಿಸಿ ತಾನೂ ನೇಣಿಗೆ ಕೊರಳೊಡ್ಡಿರೋ ಈ ಪಾಪಿ ಬೇರ್ಯಾರು ಅಲ್ಲ, ವರಸೆಯಿಂದ ಮೃತ ಕಮಲಗೆ ಚಿಕ್ಕಪ್ಪನೇ ಆಗಬೇಕಾಗಿರುವ 52 ವರ್ಷದ ಮುತ್ತು. ಇದನ್ನೂ ಓದಿ: ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ

ಬುಧವಾರ ಸಂಜೆ 7 ಗಂಟೆ ವೇಳೆಗೆ ಕಮಲ ತನ್ನ 9 ವರ್ಷದ ಮಗಳನ್ನು ಕರೆದುಕೊಂಡು ರಾಮನಹಳ್ಳಿಯ ಹೊಳೆಯಿಂದ ಆಚೆಗೆ ಇರುವ ಸಂಬಂಧಿಕರ ಮನೆಗೆ ಹೋಗೋದಕ್ಕೆ ಸೇತುವೆಯನ್ನು ದಾಟಿದ್ದಾರೆ. ಆದರೆ ಹೊಳೆಯ ಮತ್ತೊಂದು ದಂಡೆಯಲ್ಲೇ ಇರುವ ಮನೆಯಿಂದ ಬಂದ ಈ ಪಾಪಿ ಮುತ್ತು, ನೀನು ಇಲ್ಲಿ ಬರಲೇಬಾರದು. ನಿನ್ನನ್ನು ಸುಮ್ಮನೇ ಬಿಡೋದಿಲ್ಲ ಎಂದು ಹಿಡಿದು ಎಳೆದಾಡಿ ಹೊಳೆಗೆ ನೂಕೇ ಬಿಟ್ಟಿದ್ದಾನೆ. ಕಾರಣ ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದು, ಮುತ್ತು ಆಗಾಗ ಆಕೆಯ ಮನೆಗೆ ಹೋಗಿ ಬರುತ್ತಿದ್ದ. ಕೆಲ ಸಮಯದಿಂದ ಅಕೆಯ ಗಂಡನೊಂದಿಗೆ ಜಗಳ ಅಗಿರುವುದಿಂದ ಮನೆಗೆ ಹೋಗಿ ಬರುವುದು ಕಡಿಮೆ ಅಗಿದೆ. ಹೀಗಾಗಿ ನಿನ್ನೆ ಆಕೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುವ ಸಂದರ್ಭ ಅಕೆಯನ್ನು ಎಳೆದಾಡಿದ್ದಾನೆ. ಆಕೆಯೊಂದಿಗೆ ಇದ್ದ ಕುಟುಂಬಸ್ಥರಿಗೂ ಮುತ್ತು ಕೊಲೆ ಬೆದರಿಕೆ ಹಾಕಿ, ಅಲ್ಲಿಂದ ಜೊತೆಯಲ್ಲಿ ಇರುವವರನ್ನು ಕಳುಹಿಸಿದ್ದಾನೆ.

ಸಂಜೆ ಸೇತುವೆ ಬಳಿ ಕಮಲ ಹಾಗೂ ಮುತ್ತು ಜಗಳ ಆಡಿದ್ದಾರೆ. ಕೋಪದಿಂದ ಮುತ್ತು ಆಕೆಯನ್ನು ಸೇತುವೆ ಕೆಳಗೆ ಹಾಕಿದ್ದಾನೆ. ಗ್ರಾಮದಲ್ಲಿ ಕತ್ತಲು ಆಗಿರುವುದರಿಂದ ಯಾರಿಗೂ ಆಕೆ ಸೇತುವೆ ಬಳಿ ಜಗಳ ಆಡಿರುವುದು ಅಷ್ಟು ಗೊತ್ತಾಗಿಲ್ಲ. ಇತ್ತ ಸೇತುವೆಗೆ ಬಿದ್ದ ಕಮಲಳನ್ನು ಎಳೆದುಕೊಂಡು ಹೋಗಿ, ಕತ್ತಿ ತೋರಿಸಿ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಬೆಳಗ್ಗೆ ಗ್ರಾಮಸ್ಥರಿಗೆ ಈ ವಿಚಾರ ಗೊತ್ತಾಗುತ್ತದೆ ಎಂಬ ಭಯದಿಂದ ಆಕೆಯನ್ನು ಬೆಟ್ಟದ ಮೇಲೆ ಹತ್ಯೆ ಮಾಡಿ ನೇಣು ಹಾಕಿದ್ದಾನೆ. ಇಷ್ಟು ಮಾತ್ರವಲ್ಲದೆ ಕಮಲಳನ್ನು ಕೊಲೆಗೈದ ಬಳಿಕ ಆಕೆಯನ್ನು ಬಿಟ್ಟು ಬದುಕುವ ಶಕ್ತಿ ಇಲ್ಲ ಎಂದು ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ರಾಮನಗರ ಗ್ರಾಮಕ್ಕೆ ತೆರಳಿ ರಸ್ತೆ ಪರಿಶೀಲಿಸಿದ ದಾವಣಗೆರೆ ಡಿಸಿ

ಒಟ್ಟಿನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ತೆರಳುತ್ತಿದ್ದ ಕಮಲ, ಮುತ್ತು ಕೋಪಕ್ಕೆ ಬಲಿಯಾಗಿದ್ದಾಳೆ. ಒಂದು ಮಗುವಿನ ತಾಯಿಯಾಗಿರುವ ಕಮಲ ಹಾಗೂ ಸಂಬಂಧಿಯ ಅನೈತಿಕ ಸಂಬಂಧದಿಂದ ಇದೀಗ ಹೆಣ್ಣು ಮಗುಯೊಂದು ತಾಯಿ ಇಲ್ಲದೆ ಕಂಗಾಲಾಗಿದೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *