ಪತಿಯ ಮೊದಲ ಹೆಂಡತಿಯೊಂದಿಗೆ ಗಲಾಟೆ ಮಾಡಿ 50 ಬಾರಿ ಚಾಕು ಚುಚ್ಚಿದ ಮಹಿಳೆ!

Public TV
1 Min Read

ಭೋಪಾಲ್‌: ಮಹಿಳೆಯೊಬ್ಬಳು ತನ್ನ ಪತಿಯ ಮೊದಲ ಹೆಂಡತಿಯೊಂದಿಗೆ (Wife) ಗಲಾಟೆ ಮಾಡಿ 50 ಬಾರಿ ಚಾಕು ಚುಚ್ಚಿದ ಘಟನೆ ಮಧ್ಯಪ್ರದೇಶದ (Madhya Pradesh) ರೇವಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್‌ ಆಗಿದ್ದು ಆರೋಪಿ, ಮಹಿಳೆಗೆ ಪದೇ ಪದೇ ಚಾಕು ಚುಚ್ಚುವುದನ್ನು ತೋರಿಸಿದೆ.

ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ಜಯಾ (26) ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಮಾನ್ಸಿ (22) ಎಂದು ಗುರುತಿಸಲಾಗಿದೆ. ಈ ಇಬ್ಬರು ಮಹಿಳೆಯರು ರಾಂಬಾಬು ವರ್ಮಾ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು.

ಅಕ್ಟೋಬರ್ 31 ರ ದೀಪಾವಳಿಯಂದು ಇಬ್ಬರು ಮಹಿಳೆಯರ ನಡುವೆ ಗಲಾಟೆಯಾಗಿದೆ. ಈ ವೇಳೆ ಮಾನ್ಸಿ, ಜಯಾಳಿಗೆ 50ಕ್ಕೂ ಹೆಚ್ಚು ಬಾರಿ ಚಾಕು ಇರಿದಿದ್ದಾಳೆ. ಜಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಜಯಾ ಅವರಿಗೆ ಅನಾರೋಗ್ಯದ ಕಾರಣದಿಂದ ರಾಂಬಾಬು ವರ್ಮಾ ಅವರು ಮಾನ್ಸಿಯನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ಮಾನ್ಸಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

Share This Article