ಟಿಕೆಟ್ ಸಿಕ್ಕಿಲ್ಲ ಎಂದು ಬೋಗಿಯ ಕೆಳಗೆ ಅವಿತು 290 ಕಿಮೀ ಪಯಣಿಸಿದ ಭೂಪ

Public TV
1 Min Read

– ಜಬಲ್ಪುರದಲ್ಲಿ ಗಾಲಿಗಳನ್ನು ಪರಿಶೀಲಿಸುವಾಗ ಯುವಕನನ್ನು ವಶಕ್ಕೆ ರೈಲ್ವೇ ಪೊಲೀಸರು

ಭೋಪಾಲ್: ಟಿಕೆಟ್ ಸಿಕ್ಕಿಲ್ಲ ಎಂದು ಬೋಗಿಯ ಕೆಳಗೆ ಅವಿತುಕೊಂಡು ಕುಳಿತು ಯುವಕನೊಬ್ಬ 290 ಕಿ.ಮೀ ಪ್ರಯಾಣಿಸಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

ಇಟಾರ್ಸಿಯಿಂದ (Itarsi) ಪ್ರಯಾಣಿಸಲು ಟಿಕೆಟ್ ಸಿಗದಿರುವ ಕಾರಣ ತನ್ನ ಪ್ರಾಣವನ್ನೇ ಪಣಕ್ಕಿಟ್ಟು 290 ಕಿ.ಮೀ ಪ್ರಯಾಣಿಸಿದ್ದಾನೆ.ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ – ಮೃತರ ಸಂಖ್ಯೆ 4ಕ್ಕೆ ಏರಿಕೆ

ದಾನಪುರ್ ಎಕ್ಸಪ್ರೆಸ್‌ (Danapur Express) ರೈಲಿನಲ್ಲಿ ಇಟಾರ್ಸಿಯಿಂದ ಪ್ರಯಾಣಿಸಲು ಟಿಕೆಟ್ ಸಿಗದ ಕಾರಣ ಬೋಗಿಯ ಕೆಳಗೆ ಅವಿತುಕೊಂಡು ಕುಳಿತಿದ್ದಾನೆ. ಜಬಲ್ಪುರ (Jabalapur) ರೈಲು ನಿಲ್ದಾಣದ ಬಳಿ ಕ್ಯಾರೇಜ್ ಮತ್ತು ವ್ಯಾಗನ್ ಇಲಾಖೆ ಸಿಬ್ಬಂದಿ ನಡೆಸಿದ ರೋಲಿಂಗ್ ಪರೀಕ್ಷೆ ವೇಳೆ ವ್ಯಕ್ತಿಯೊಬ್ಬ ಅಡಗಿಕೊಂಡಿರುವುದು ಪತ್ತೆಯಾಗಿದೆ.

ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಇಟಾರ್ಸಿಯಲ್ಲಿ ತಾನು ರೈಲು ಹತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಟಿಕೆಟ್ ಖರೀದಿಸಲು ಹಣವಿಲ್ಲದ ಕಾರಣ, ರೈಲಿನ ಚಕ್ರಗಳ ನಡುವೆ ಪ್ರಯಾಣಿಸುವುದು ಸೂಕ್ತವೆನಿಸಿತು ಎಂದು ತಿಳಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಯನ್ನು ಕರೆಸಲಾಯಿತು. ಆದರೆ ಆ ವ್ಯಕ್ತಿ ರೈಲಿನ ಕೆಳಗೆ ಹೇಗೆ ಅಡಗಿ ಕುಳಿತನು ಎನ್ನುವ ಕುರಿತು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿ ಬೋಗಿಯಿಂದ ಕೆಳಗಿನಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ – ರಾತ್ರಿ 11 ಗಂಟೆ ಬಳಿಕ ಎಂ.ಜಿ ರಸ್ತೆಯಿಂದ ಸಂಚಾರ ಬಂದ್‌

Share This Article