ಚುನಾವಣೆ ಗೆಲ್ಲಲು ಬಾಬಾನ ಕೈಯಿಂದ ಚಪ್ಪಲಿ ಏಟು ತಿಂದ ಕೈ ಅಭ್ಯರ್ಥಿ

Public TV
1 Min Read

ಭೋಪಾಲ್‌: ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ನಾನಾ ಕಸರತ್ತುಗಳನ್ನು ಮಾಡುವುದು ಹೊಸದೆನಲ್ಲ. ಚುನಾವಣೆ ಹತ್ತಿರ ಬಂದಾಗ ಧಾರ್ಮಿಕ ಸ್ಥಳಗಳು, ಜ್ಯೋತಿಷ್ಯದ ಮೊರೆ ಹೋಗುವುದು ಸಹಜ. ಆದರೆ ಮಧ್ಯಪ್ರದೇಶದ (Madhya Pradesh) ಕಾಂಗ್ರೆಸ್‌ (Congress) ಅಭ್ಯರ್ಥಿಯೊಬ್ಬರು ಚುನಾವಣೆ ಗೆಲ್ಲಲು ಬಾಬಾ ಅವರಿಂದ ಚಪ್ಪಲಿಯಲ್ಲಿ ಹೊಡೆಸಿಕೊಂಡು ಸುದ್ದಿಯಾಗಿದ್ದಾರೆ.

ಚುನಾವಣೆಗೆ ಮುನ್ನ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ (Paras Saklecha) ಅವರು ಫಕೀರ್ ಬಾಬಾನ (Fakir baba) ಮುಂದೆ ಚಪ್ಪಲಿಯಿಂದ ಹೊಡಿಸಿಕೊಂಡಿದ್ದಾರೆ. ಸದ್ಯ ಈಗ ಚಪ್ಪಲಿಯಿಂದ ಬಾಬಾ ಹೊಡೆಯುತ್ತಿರುವ ವಿಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

ಫಕೀರ್ ಬಾಬಾ ಅವರು ಕೆಲವೊಮ್ಮೆ ಮುಖ, ಬೆನ್ನು, ಭುಜದ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅಲ್ಲಿದ್ದ ವ್ಯಕ್ತಿಗಳು ಹೊಡೆಯುವುದನ್ನು ನಿಲ್ಲಿಸಿ ಎಂದು ಹೇಳಿದರೂ ಬಾಬಾ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಬಾಬಾ ಹೊಡೆಯುತ್ತಿರುವಾಗ ಅಭ್ಯರ್ಥಿ ನಗುತ್ತಲೇ ಇರುತ್ತಿದ್ದರು. 2019ರಲ್ಲಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಅವರನ್ನು ಪರಸ್ ಸಕ್ಲೇಚಾ ಮಾಟಗಾತಿ ಎಂದು ಕರೆದಿದ್ದರು. ಇದನ್ನೂ ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

ರಸ್ತೆಯಲ್ಲಿ ತಿರುಗಾಡುವ ಈ ಬಾಬಾ ತನ್ನ ಬಳಿಗೆ ಬರುವ ಜನರಿಗೆ ಚಪ್ಪಲಿಯಿಂದ ಹೊಡೆದು ಆಶೀರ್ವಾದ ಮಾಡುತ್ತಾರೆ. ಅನೇಕ ಜನರು ತಮ್ಮ ದೂರು, ಸಮಸ್ಯೆ ಹೇಳಿಕೊಂಡು ಬಾಬಾಗೆ ಹೊಸ ಚಪ್ಪಲಿಗಳನ್ನು ನೀಡುತ್ತಾರೆ. ಬಾಬಾ ಚಪ್ಪಲಿಯಿಂದ ಹೊಡೆಯುವ ಮೂಲಕ ಆಶೀರ್ವಾದ ಮಾಡುತ್ತಾರೆ ಎಂದು ವರದಿಯಾಗಿದೆ.

ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನ.17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಡಿ.3 ರಂದು ಮತ ಎಣಿಕೆ ನಡೆಯಲಿದೆ.

Share This Article