ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್-ಪ್ರಣಾಳಿಕೆ ಬದಲಿಸಲು ಮುಂದಾದ ಭಾಜಪ 

Public TV
1 Min Read

ಭೋಪಾಲ್: ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಲಿದೆ ಎಂಬುವುದನ್ನು ಹಲವು ಸರ್ವೆಗಳು ಹೇಳಿವೆ. ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ತೀವ್ರ ಪೈಪೋಟಿಯನ್ನು ಮನಗಂಡಿರುವ ಮಧ್ಯ ಪ್ರದೇಶದ ಬಿಜೆಪಿ ನಾಯಕರು ಪ್ರಣಾಳಿಕೆಯನ್ನು ಬದಲಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕರ ಸಮಿತಿಯೊಂದು ಈಗಾಗಲೇ ಪ್ರಣಾಳಿಕೆಯನ್ನು ಸಿದ್ಧಪಡಿಸಿತ್ತು. ಆದ್ರೆ ಕಾಂಗ್ರೆಸ್ ತನ್ನ ಬದಲಾವಣೆಯಲ್ಲಿ ಆದಾಯ ಕಡಿಮೆ ಇರುವ ರೈತರ ಸಾಲಮನ್ನಾದ ಕುರಿತಾಗಿ ತನ್ನ ಪ್ರಣಾಳಿಕೆಯಲ್ಲಿ ಬರೆದುಕೊಂಡಿದೆಯಂತೆ. ಹಾಗಾಗಿ ಹಿರಿಯ ನಾಯಕರು ಪ್ರಣಾಳಿಕೆ ಸಮಿತಿ ರಚನೆಗೆ ಕೆಲವು ಸಲಹೆಗಳನ್ನು ನೀಡಿದೆಯಂತೆ.

ಮಧ್ಯಪ್ರದೇಶ ಬಿಜೆಪಿ ಚುನಾವಣಾ ಉಸ್ತುವಾರಿ ಧಮೇಂದ್ರ ಪ್ರಧಾನ್ ಮತ್ತು ರಾಜ್ಯ ಉಸ್ತುವಾರಿ ಡಾ. ವಿನಯ್ ಸಹಸ್ರಬುದ್ದೆ ಸಮಿತಿಗೆ ಮಹಾರಾಷ್ಟ್ರ ಮತ್ತು ಓರಿಸ್ಸಾ ರಾಜ್ಯಗಳ ಪ್ರಣಾಳಿಕೆ ನೋಡಿ ಕೆಲವು ಬದಲಾವಣೆಯನ್ನು ಸೂಚಿಸಿದೆ ಎಂದು ಪತ್ರಿಕೆಗಳು ಪ್ರಕಟಿಸಿವೆ.

ಪ್ರಣಾಳಿಕೆ ಬದಲಾವಣೆ ಕುರಿತಾಗಿ ಸಿಎಂ ಶಿವರಾಜ್‍ಸಿಂಗ್ ಚೌಹಾಣ್ ಸಮಿತಿಯ ಜೊತೆ ಸುದೀರ್ಘ 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ಜನ್ ಆಶೀರ್ವಾದ ಯಾತ್ರೆ ನಡೆಯುತ್ತಿದೆ. ಈ ಎಲ್ಲ ಕಾರ್ಯಕ್ರಮಗಳ ಮುಗಿದ ಬಳಿಕ ಪಕ್ಷದ ಹಿರಿಯ ನಾಯಕರು ಮತ್ತು ಸಮಿತಿ ಜೊತೆ ಮತ್ತೊಮ್ಮೆ ಸಭೆ ನಡೆಸಿ ಪ್ರಣಾಳಿಕೆಯನ್ನು ಅಂತಿಮಗೊಳಿಸಲು ರಾಜ್ಯ ಬಿಜೆಪಿನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ನಡೆಸುತ್ತಿರುವ ಪ್ರಚಾರ ಸಭೆಯಲ್ಲಿ ಅತಿ ಹೆಚ್ಚಿನ ಜನರು ಭಾಗಿಯಾಗುತ್ತಿರೋದು ಬಿಜೆಪಿಯಲ್ಲಿ ಭಯದ ವಾತಾವರಣ ಮೂಡಿಸಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ರೈತರು, ಸಾಮಾನ್ಯ ವರ್ಗದ ಜನರ ಮತಗಳನ್ನೇ ಕೇಂದ್ರಿಕರಿಸಿ ಪ್ರಣಾಳಿಕೆಯನ್ನು ರಚಿಸಲು ಚಿಂತನೆ ನಡೆಸಿದೆಯಂತೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಧ್ಯಮ ಮತ್ತು ಸಾಮಾನ್ಯ ವರ್ಗದ ಪರವಾಗಿರುವ ಪ್ರಣಾಳಿಕೆ ರಚನೆಗಾಗಿ ಸಿದ್ಧತೆ ನಡೆಸಿಕೊಂಡಿದೆ ಎನ್ನಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *