50 ಸಾವಿರ ಸರ್ಕಾರಿ ನೌಕರರಿಗೆ 6 ತಿಂಗಳಿಂದ ವೇತನವೇ ಇಲ್ಲ – 230 ಕೋಟಿ ವಂಚನೆ!

Public TV
1 Min Read

ಭೋಪಾಲ್: 50 ಸಾವಿರ ಸರ್ಕಾರಿ ನೌಕರರಿಗೆ 6 ತಿಂಗಳಿಂದ ವೇತನವೇ ನೀಡದೇ 230 ಕೋಟಿ ರೂ. ವಂಚಿಸಿದ ಬೃಹತ್ ಹಗರಣ ಮಧ್ಯಪ್ರದೇಶದಲ್ಲಿ (Madhya Pradesh) ತಡವಾಗಿ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶ ಸರ್ಕಾರದಲ್ಲಿನ ಒಟ್ಟಾರೆ ಸರ್ಕಾರಿ ನೌಕರರ ಪೈಕಿ 9% ರಷ್ಟು ಮಂದಿಗೆ ವೇತನವೇ ನೀಡದೇ ವಂಚಿಸಲಾಗಿದೆ. ದಾಖಲೆಗಳ ಪ್ರಕಾರ ನೌಕರರ ಹೆಸರು, ಗುರುತು ಪತ್ರ, ಗುರುತಿನ ಸಂಖ್ಯೆ ಎಲ್ಲವೂ ನಮೂದಾಗಿದೆ. ಆದರೆ ಕೆಲವು ಕಾರಣ ನೀಡಿ ನೌಕರರಿಗೆ ವೇತನವೇ ನೀಡದಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಪ್ರಕರಣ – ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

ಈ ನೌಕರರು ವೇತನ ರಹಿತ ರಜೆ ಪಡೆದಿದ್ದರೋ, ಅಮಾನತು ಮಾಡಲಾಗಿದೆಯೋ, ಮತ್ಯಾಕೆ ವೇತನ ಕೊಟ್ಟಿಲ್ಲ ಅನ್ನೋದು ನಿಗೂಢವಾಗಿಯೇ ಇದೆ. ಮಧ್ಯಪ್ರದೇಶ ಮುಖ್ಯ ಕಾರ್ಯದರ್ಶಿ ಪ್ರಕರಣದ ಕುರಿತು ಹಣಕಾಸು ಇಲಾಖೆಗೆ ತನಿಖೆಗೆ ಆದೇಶಿಸಿದ್ದಾರೆ. 6000 ಡಿಡಿಒಗಳ ಕೆಲಸದ ಮೇಲೆ ನಿಗಾ ವಹಿಸಲಾಗಿದ್ದು, ಅವರ ಸೇವೆ ಮೇಲೆ ತೂಗುಗತ್ತಿ ಬೀಳುವ ಸಾಧ್ಯತೆ ಇದೆ.

6000 ಡಿಡಿಓಗಳಿಗೆ 15 ದಿನಗಳಲ್ಲಿ 230 ಕೋಟಿ ರೂ. ವೇತನ ಬಿಡುಗಡೆ ಆಗಿದ್ದರೂ, ನೌಕರರಿಗೆ ನೀಡದೇ ಇರುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: KSCA ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌ ಮಧ್ಯಂತರ ಆದೇಶ

Share This Article