ಇಡೀ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಅಂತ ಹೊರಟ ನಮ್ಮ ಪಕ್ಷ ಇವತ್ತು ಬುದ್ಧಿ ಹೇಳಿಸಿಕೊಳ್ಳಬೇಕಾಗಿದೆ: ಮಾಧುಸ್ವಾಮಿ

Public TV
1 Min Read

ಬೆಂಗಳೂರು: ನಮ್ಮ ದುರಂತ ಅಂದ್ರೆ, ಇಡೀ ಭಾರತ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಅಂತ ಹೊರಟ ನಮ್ಮ ಪಕ್ಷ ಇವತ್ತು ಬುದ್ಧಿ ಹೇಳಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ ಎಂದು ಅಧಿವೇಶನದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಪರಿಷತ್‍ನಲ್ಲಿ ಈಶ್ವರಪ್ಪ ರಾಷ್ಟ್ರಧ್ವಜ ವಿವಾದಾತ್ಮಕ ಹೇಳಿಕೆ ಚರ್ಚೆ ವೇಳೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದು ನಾವು. ನಮಗೆ ಯಾವುದೇ ಹಿಡನ್ ಅಜೆಂಡಾ ಇಲ್ಲ. ನಾವು ದೇಶದ್ರೋಹದ ಹೇಳಿಕೆ ಕೊಟ್ಟಿಲ್ಲ. ನಿನ್ನೆ ಎಲ್ಲವನ್ನು ಹೇಳಲಾಗಿದೆ. ಈಶ್ವರಪ್ಪ ಹೇಳಿಕೆ ಸ್ಪಷ್ಟವಾಗಿ ಇದೆ. ಎಲ್ಲೂ ಕೂಡಾ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ರಾಷ್ಟ್ರಧ್ವಜವೇ ಅಂತಿಮ ಅಂತ ಹೇಳಿದ್ದಾರೆ. ಈ ಘಟನೆ ಇಲ್ಲಿಗೆ ಬಿಡಬೇಕು. ಈಶ್ವರಪ್ಪ ಎಲ್ಲೂ ಕೇಸರಿ ಧ್ವಜ ಹಾರಿಸ್ತೀನಿ ಅಂತ ಹೇಳಿಲ್ಲ. 200, 300 ವರ್ಷಕ್ಕೆ ಆಗಬಹುದು ಅಂತ ಹೇಳಿದ್ದಾರೆ. ಅಷ್ಟು ಹೊತ್ತಿಗೆ ನಾವು ಯಾರು ಇರುವುದಿಲ್ಲ ಈ ವಿಷಯ ಇಲ್ಲಿಗೆ ಬಿಡಬೇಕು ಎಂದು ಮನವಿಮಾಡಿಕೊಂಡರು. ಇದನ್ನೂ ಓದಿ: ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದ ಸಂಘ ಪರಿವಾರದವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್

ಇಂಟರಾಕ್ಷನ್ ಸಂದರ್ಭ ಮಾತನಾಡಿದ್ದು ಸ್ಟೇಟ್‍ಮೆಂಟ್ ಆಗುವುದಿಲ್ಲ. ನಮ್ಮ ಸರ್ಕಾರ ಮೋದಿ ನೇತೃತ್ವದಲ್ಲಿ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಬಗ್ಗೆ ಒಡಕು ಮಾತುಗಳನ್ನು ಆಡುವುದಿಲ್ಲ. ಈಶ್ವರಪ್ಪ ತಮ್ಮ ಹೇಳಿಕೆಯನ್ನು ತಿರುಚುವುದಕ್ಕೂ ಹೋಗಿಲ್ಲ. ಈ ಪ್ರಕರಣದ ಚರ್ಚೆಯನ್ನು ಕಾಂಗ್ರೆಸ್ ಇಲ್ಲಿಗೆ ನಿಲ್ಲಿಸಲಿ ಎಂದು ಕೇಳಿಕೊಂಡರು. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

ಇತ್ತ ಕಾಂಗ್ರೆಸ್ ಈಶ್ವರಪ್ಪ ರಾಜಿನಾಮೆ ಕೊಡಬೇಕೆಂದು ಪಟ್ಟುಹಿಡಿದು ಕೂತಿದೆ. ಈ ವೇಳೆ ಸಭಾಪತಿ ಹೊರಟ್ಟಿ ಮಾತನಾಡಿ, ಇದು ಇಲ್ಲಿಗೆ ಮುಕ್ತಾಯ ಮಾಡೋಣ. ಪ್ರಶ್ನೋತ್ತರ ಕಲಾಪ ಎಂದು ರೂಲಿಂಗ್ ಕೊಟ್ಟರು, ಈ ವೇಳೆ ಸಭಾಪತಿ ರೂಲಿಂಗ್‍ಗೆ ವಿರೋಧಿಸಿ ಕಾಂಗ್ರೆಸ್ ಧರಣಿ ಆರಂಭಿಸಿತು. ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾಯಿತು. ಅಯ್ಯಯ್ಯೋ ಅನ್ಯಾಯ ಅಂತ ಕೂಗುತ್ತ ಈಶ್ವರಪ್ಪ ವಿರುದ್ಧ ಬಿತ್ತಿಪತ್ರ ಹಿಡಿದು ಪ್ರತಿಭಟನೆಗೆ ಮುಂದಾಯಿತು.

Share This Article
Leave a Comment

Leave a Reply

Your email address will not be published. Required fields are marked *