ಬೆಂಗಳೂರು: ನಮ್ಮ ಹಳ್ಳಿಗಳ ಕಡೆ ಕಾಡಿನಲ್ಲಿ ಮನೆ ಕಟ್ಟಿಕೊಂಡು ಇರುತ್ತಾರೆ. ಆಗ ಅಕ್ರಮ ಸಕ್ರಮ ಮಾಡೋದಿಲ್ಲವಾ? ಅದೇ ರೀತಿ ಕೋಗಿಲು ಲೇಔಟ್ (Kogilu Layout) ಅಕ್ರಮ ನಿವಾಸಿಗಳಿಗೆ ಸಹಾಯ ಮಾಡಲಾಗ್ತಿದೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಸರ್ಕಾರದ ನಿರ್ಧಾರ ಸಮರ್ಥನೆ ಮಾಡಿಕೊಂಡಿದ್ದಾರೆ.
ಕೋಗಿಲು ಲೇಔಟ್ ಅಕ್ರಮ ಮನೆಗಳ ತೆರವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಏನಿದೆಯೋ ಅದು ಮಾತ್ರ ಆಗುತ್ತದೆ. ಈಗಾಗಲೇ ಡಿಸಿಎಂ ಅವರು ಇದರ ಬಗ್ಗೆ ಮಾತಾಡಿದ್ದಾರೆ. ಅದರ ಬಗ್ಗೆ ಮಾತಾಡೋದು ಸರಿಯಲ್ಲ. ಯಾರಿಗೂ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳೋದಾಗಿ ಡಿಸಿಎಂ ಹೇಳಿದ್ದಾರೆ. ಇದು ಸರ್ಕಾರದ ಕರ್ತವ್ಯವೂ ಹೌದು. ಅಕ್ರಮ ಸಕ್ರಮ ಅಂತ ನಮ್ಮ ಹಳ್ಳಿ ಕಡೆ ಕಾಡಿನಲ್ಲಿ ಮನೆ ಕಟ್ಟಿಕೊಳ್ಳುತ್ತಾರೆ. ಅದೇ ರೀತಿ ಇದು ಒಂದು ವಿಷಯ ಇರುತ್ತದೆ. ಡಿಸಿಎಂ ಡಿಕೆಶಿವಕುಮಾರ್ ಇತ್ಯರ್ಥ ಮಾಡ್ತಾರೆ, ಏನು ತೊಂದರೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕದವರಿದ್ರೆ ಮಾತ್ರ ಮನೆ ಕೊಡ್ತೀವಿ, ಹೊರಗಿನವರಿಗೆ ಮನೆ ಕೊಡಲ್ಲ: ಜಮೀರ್ ಸ್ಪಷ್ಟನೆ
ಪ್ರವಾಹ ಬಂದರೂ ಮನೆ ಕಟ್ಟಿಕೊಡದ ಸರ್ಕಾರ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವಿನ್ನು ಪ್ರೊಸೇಸ್ ಮಾಡ್ತಾ ಇದ್ದೀವಿ. ಸಮಸ್ಯೆಯ ನಿವಾರಣೆ ಪ್ರಕ್ರಿಯೆ ಶುರುವಾಗಿದೆ. ಅದು ಆಗಲಿ ಬಿಡಿ. ಹೇಳಿಕೆ ಕೊಟ್ಟ ಕೂಡಲೇ ಎಲ್ಲವೂ ಮುಗಿದು ಹೋಗುತ್ತಾ? ಸಮಸ್ಯೆ ಇದ್ದಾಗ ಪರಿಹಾರ ಮಾಡೋದು ಸರ್ಕಾರದ ಕೆಲಸ. ವಲಸಿಗರು, ಬೇರೆ ಜಾತಿಯವರು, ಬೇರೆ ರಾಜ್ಯದವರು ಅಂತ ಮಾಡಬಾರದು. ಅಲ್ಲಿ ನಮ್ಮೋರು ಅಂದಾಗ ಮನುಷ್ಯರು ಇರುತ್ತಾರೆ. ವೇಣುಗೋಪಾಲ್ ಹೇಳಿದ್ರೋ, ಬಿಜೆಪಿ ಅವರು ಹೇಳಿದ್ರೋ ಅದು ಬೇರೆ ಪ್ರಶ್ನೆ. ತಪ್ಪಾಗಿರೋದು ಸರಿ ಮಾಡೋದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರು ಉತ್ತರ ಕೊಡ್ತಾರೆ ಅಂತ ತಿಳಿಸಿದ್ದಾರೆ.
ವೇಣುಗೋಪಾಲ್ ಅವರಿಗೆ ಸರ್ಕಾರ ಮಣಿದಿದೆ ಅನ್ನೋದು ಬಿಜೆಪಿ ಆರೋಪ. ಬಿಜೆಪಿ ಅವರು ಇನ್ನು 2.5 ವರ್ಷ ವಿರೋಧ ಪಕ್ಷದಲ್ಲಿ ಇರಲಿ. ಮಾತಾಡಿಕೊಂಡು ಇರಲಿ ಎಂದು ಲೇವಡಿ ಮಾಡಿದ್ದಾರೆ.ಇದನ್ನೂ ಓದಿ: ಅತಿಕ್ರಮಣದಾರರಿಗೆ ಮನೆ, ಸಬ್ಸಿಡಿ ನೆರವು ವಿಪರ್ಯಾಸ: ಜೋಶಿ ಕಿಡಿ

