ಅಪ್ಪಂಗೂ, ತಾತನಿಗೂ ಇಬ್ರೂ ಹೆಂಡ್ತಿರು, ನಿನ್ನ ಮದ್ವೆ ಆಗ್ತೀನಿ ಅಂತ ಕಥೆ ಕಟ್ಟಿದ್ದ- ಮನು ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತೆ

Public TV
3 Min Read

– ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ
– ಶನಿವಾರ ನನ್ನ ಖಾಸಗಿ ವಿಡಿಯೋ ಮಾಡಿದ್ದಕ್ಕೆ ದೂರು

ಮ್ಮ ಅಪ್ಪಂಗೆ ಇಬ್ಬರೂ ಹೆಂಡ್ತಿರು, ತಾತನಿಗೂ ಇಬ್ಬರೂ ಹೆಂಡ್ತಿರು. ಹೀಗಾಗಿ ದೇವರೇ ನಮ್ಮನ್ನು ಜೋಡಿ ಮಾಡಿದ್ದಾನೆ. ಪ್ರಪಂಚದಲ್ಲಿ ಎರಡ್ಮೂರು ಮದುವೆ ಮಾಡಿಕೊಂಡವರು ಇಲ್ವಾ ಎಂದು ಹೇಳ್ತಿದ್ದ ಎಂದು ಮನು (Madenur Manu) ವಿರುದ್ಧ ಸಂತ್ರಸ್ತ ನಟಿ (Victim Actress) ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

ನಟ ಮನು ಬಗ್ಗೆ ಪಬ್ಲಿಕ್ ಟಿವಿಗೆ ಜೊತೆ ನಟಿ ಮಾತನಾಡಿ ಹಲವು ವಿಷಯಗಳನ್ನು ತಿಳಿಸಿದ್ದಾರೆ. ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ದಕ್ಕೆ ನಾನು ಪದೇ ಪದೇ ಮೋಸ ಹೋದೆ. ಮನು ಮೊದಲು ಮಾಡಿದ್ದು ಅತ್ಯಾಚಾರ, ಮನೆಯವರನ್ನು ಒಪ್ಪಿಸಿ ಆಮೇಲೆ ಮದುವೆ ಆಗ್ತೀನಿ ಅಂತ ನಂಬಿಸುಸುತ್ತಲೇ ಬಂದಿದ್ದ. ಮಾರ್ಚ್ 31 ರವರೆಗೂ ಅವನು ಕೊಟ್ಟಿರುವ ದೈಹಿಕ ಟಾರ್ಚರ್ ಅನ್ನು ಸಹಿಸಿಕೊಂಡೇ ಬಂದಿದ್ದೇನೆ. ನನಗೆ ಬೇರೆ ಅವರೊಂದಿಗೆ ಜೀವನವಿತ್ತು, ಅದು ಅವನಿಗೆ ಗೊತ್ತಿತ್ತು. ಅದನ್ನು ಈಗ ಹಾಳು ಮಾಡಿದ್ದಾನೆ. 2022ರಲ್ಲಿ ಆಗಿರುವ ಘಟನೆಯನ್ನು ಇಟ್ಟುಕೊಂಡು ಈಗ ದೂರು ನೀಡಿದ್ದು ಯಾಕೆ ಎಂದು ಜನ ಕೇಳುತ್ತಿದ್ದಾರೆ. ಅವನು ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌

ನಟಿ ಹೇಳಿದ್ದೇನು?
ಮೊದಲ ಬಾರಿಗೆ ಅತ್ಯಾಚಾರ ಆಗಿದ್ದಾಗ ಫುಲ್ ಶಾಕ್‌ನಲ್ಲಿದ್ದೆ, ಏನು ಮಾಡಬೇಕು ಎಂದು ನನಗೆ ತೋಚಲಿಲ್ಲ. ಆ ಸಮಯದಲ್ಲಿ 4 ಗೋಡೆ ಮಧ್ಯೆ ತಾಳಿ ಕಟ್ಟಿದ್ದ, 2 ವರ್ಷಗಳ ನಂತರ ಎಲ್ಲರ ಮುಂದೆ ಮದುವೆಯಾಗ್ತೀನಿ ಎಂದು ಹೇಳಿದ್ದಕ್ಕೆ ನಾನು ಮನುವನ್ನು ನಂಬಿಕೊಂಡು ಬಂದೆ. ನನಗೆ ಬೇರೆ ಅವರೊಂದಿಗೆ ಜೀವನವಿತ್ತು. ಅದನ್ನು ಕೂಡ ಮನು ಬಂದು ಅವರಿಗೆ ಹೇಳಿದ್ದಾರೆ. ನನಗೆ ಲೈಫ್ ಕೊಡ್ತೀನಿ ಅಂತ ಮನು ಮಾತು ಕೊಟ್ಟಿದ್ದ.

ನಮ್ಮ ಅಪ್ಪಂಗೆ ಇಬ್ಬರೂ ಹೆಂಡ್ತಿರು, ತಾತನಿಗೂ ಇಬ್ಬರೂ ಹೆಂಡ್ತಿರು. ಹೀಗಾಗಿ ದೇವರೇ ನಮ್ಮನ್ನು ಜೋಡಿ ಮಾಡಿದ್ದಾರೆ ಎಂದು ನಂಬಿಸಿದ್ದ. ಪ್ರಪಂಚದಲ್ಲಿ ಎರಡ್ಮೂರು ಮದುವೆ ಮಾಡಿಕೊಂಡವರು ಇಲ್ವಾ ಎನ್ನುತ್ತಿದ್ದ. ಹೀಗೆ ಮದುವೆಯಾಗುವ ಭರವಸೆ ನೀಡಿದ್ದ. ಇದು ಕಾನೂನು ಪ್ರಕಾರ ತಪ್ಪು ಎಂದು ನನಗೆ ಗೊತ್ತು. ಇದನ್ನು ನಿಲ್ಲಿಸಲು ತುಂಬಾ ಪ್ರಯತ್ನ ಮಾಡಿದೆ. ಅಷ್ಟರಲ್ಲಿ ನಾನು ಪ್ರೆಗ್ನೆಂಟ್ ಆಗಿದ್ದೆ.

ಅದು ರೇಪ್ ಅಲ್ಲ, ಒಪ್ಪಂದದ ಸಂಪರ್ಕ ಎಂದ ಮನು ಹೇಳಿದ್ದಾನೆ. ಆದರೆ ಮನು ನನ್ನ ಜೊತೆ, ಮೊದಲ ಪತ್ನಿ ಪದೇ ಪದೇ ಜಗಳ ಮಾಡುತ್ತಾಳೆ. ನನಗೆ ಅವಳೊಂದಿಗೆ ಇರೋಕೆ ಆಗ್ತಿಲ್ಲ. ಡಿವೋರ್ಸ್ ಕೊಡೋದಾಗಿ ನನಗೆ ಹೇಳಿದ್ದ. ಅವಳಿಗೆ ಮೋಸ ಮಾಡಬೇಡ ಎಂದು ಕೂಡ ನಾನು ಹೇಳಿದ್ದೆ, ಆ ನಂತರ ಎಲ್ಲರ ಮುಂದೆ ಮದುವೆಯಾಗೋದಾಗಿ ಮಾತು ಕೊಟ್ಟಿದ್ದ.

ನನಗೆ ಗೊತ್ತಿಲ್ಲ ನನ್ನ ಹಿಂದೆ ಯಾರಿದ್ದಾರೆ ಅಂತ. ನನಗೆ ಆಗಿರೋ ಅನ್ಯಾಯಕ್ಕೆ ನಾನು ಒಬ್ಬಳೇ ನಿಂತಿದ್ದೀನಿ. ಶನಿವಾರ ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಕ್ಕೆ ನಾನು ಕಂಪ್ಲೇಟ್ ಕೊಡಲು ಮುಂದಾಗಿದ್ದು, ನನಗೆ ಯಾರು ಏನು ಹೇಳಿಸಿ ಇದನ್ನು ಮಾಡಿಸುತ್ತಿಲ್ಲ. ನನಗೆ ಆಗಿರೋ ಅನ್ಯಾಯಕ್ಕೆ ನಾನೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ.

ನಮ್ಮಿಬ್ಬರ ಖಾಸಗಿ ವಿಡಿಯೋ ಇದೆಯೋ ಇಲ್ವೋ? ಡಿಲೀಟ್ ಆಗಿದ್ಯೋ ಇದರ ಬಗ್ಗೆ ನನಗೆ ಗೊತ್ತಿಲ್ಲ. ಇದನ್ನೇ ಇಟ್ಟುಕೊಂಡು ಎಲ್ಲರ ಬಳಿ ಎಲ್ಲಿ ನೆಗೆಟಿವ್ ಆಗಿ ಬಿಂಬಿಸುಸುತ್ತಾರೋ ಎಂದು ಭಯ ಆಯ್ತು. ಅದಕ್ಕೆ ನಾನು ದೂರು ನೀಡಿದ್ದೇನೆ.

ನನಗೆ ಬ್ಯಾಕ್ ಟು ಬ್ಯಾಕ್ ಆಬಾರ್ಷನ್ ಆಯ್ತು. ಅಬಾರ್ಷನ್ ಆದ್ಮೇಲೆ ನನ್ನ ಬಿಟ್ಟುಬಿಡು ಅಂದಿದ್ದ. ಇಷ್ಟೆಲ್ಲ ಆದಮೇಲೂ ಆತ ನನ್ನನ್ನು ತೊರೆಯುವ ಮಾತುಗಳನ್ನಾಡಿದ್ದಾನೆ. ನನಗೆ ಸಾಯೋವರೆಗೂ ಹೊಡೆದಿದ್ದಾನೆ. ನಾನು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದೆ. ನಮ್ಮ ವಕೀಲರ ಜೊತೆ ಚರ್ಚಿಸಿ ದೂರು ಕೊಟ್ಟಿದ್ದೇನೆ. ನಾನು ತುಂಬ ಹಣವನ್ನ ಮನುಗೆ ಕೊಟ್ಟಿದ್ದೇನೆ. ಅವನಿಗಾಗಿ ನಾನು ಲಕ್ಷ ಲಕ್ಷ ಖರ್ಚು ಮಾಡಿದ್ದೇನೆ ಎಂದು ತಿಳಿಸಿದರು.

‘ಕಾಮಿಡಿ ಕಿಲಾಡಿಗಳು ಸೀಸನ್ 2’ ವಿನ್ನರ್ ಆಗಿದ್ದ ಮಡೆನೂರು ಮನು ಇದೀಗ ಸಿನಿಮಾಗಳಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ತೆರೆಮೇಲೆ ಹೀರೋ ಆಗಿರುವ ಮಡೆನೂರು ಮನು ಬಗ್ಗೆ ರಿಯಲ್ ಲೈಫ್‌ನಲ್ಲಿ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ. ಮನು ವಿರುದ್ಧ ಕಿರುತೆರೆ ನಟಿ ಅತ್ಯಾಚಾರ, ಗರ್ಭಪಾತ, ಕೊಲೆ ಬೆದರಿಕೆ ಆರೋಪವನ್ನ ಮಾಡಿದ್ದಾರೆ. ನಟಿಯ ದೂರಿನ ಅನುಸಾರ ಎಫ್‌ಐಆರ್ ದಾಖಲಿಸಿಕೊಂಡಿರುವ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಮಡೆನೂರು ಮನುರನ್ನ ಬಂಧಿಸಿದ್ದಾರೆ.

Share This Article