ನವದೆಹಲಿ: ಈ ವರ್ಷದ ಅಂತ್ಯದ ಒಳಗಡೆ ಮೇಡ್ ಇನ್ ಇಂಡಿಯಾ (Made In India) ಸೆಮಿಕಂಡಕ್ಟರ್ ಚಿಪ್‌ಗಳು (Semiconductor Chip) ಮಾರುಕಟ್ಟೆಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಕೆಂಪುಕೋಟೆ ಮುಂದೆ ಸ್ವಾತಂತ್ರ್ಯ ದಿನಾಚರಣೆ (Independence Day) ಭಾಷಣ ಮಾಡಿದ ಮೋದಿ, ಸೆಮಿಕಂಡಕ್ಟರ್‌ಗಳಿಗೆ ಸಂಬಂಧಿಸಿದ ಫೈಲ್‌ಗಳು 50-60 ವರ್ಷದ ಹಿಂದೆ ಬಂದಿತ್ತು. ಆದರೆ ಹಲವು ನಿರ್ಬಂಧಗಳಿಂದ ಸೆಮಿಕಂಡಕ್ಟರ್‌ಗಳ ಕಲ್ಪನೆಯು ಆಕಾರ ಪಡೆಯುವ ಮೊದಲೇ ಸ್ಥಗಿತಗೊಂಡಿತ್ತು. ದಶಕಗಳ ನಂತರ ಅನೇಕ ದೇಶಗಳು ಸೆಮಿಕಂಡಕ್ಟರ್‌ಗಳನ್ನು ಕರಗತ ಮಾಡಿಕೊಂಡಿವೆ ಮತ್ತು ಜಗತ್ತಿನಲ್ಲಿ ತಮ್ಮ ಬಲವನ್ನು ಸ್ಥಾಪಿಸಿವೆ ಎಂದರು. ಇದನ್ನೂ ಓದಿ: 12 ಸ್ವಾತಂತ್ರ್ಯ ಸಂಭ್ರಮಗಳಲ್ಲಿ ಭಾಗಿ| 2014 ರಿಂದ 2025 – ಮೋದಿ ಪೇಟ, ವಿಭಿನ್ನ ಲುಕ್ ನೋಡಿ
#WATCH | PM Narendra Modi says, “…We are working on semiconductors on Mission Mode…By the end of this year, Made in India semiconductor chips, made by the people in India, will hit the market.”
Video: DD pic.twitter.com/SM5oTOhjAO
— ANI (@ANI) August 15, 2025
21ನೇ ಶತಮಾನವು ತಂತ್ರಜ್ಞಾನ ಆಧಾರಿತವಾಗಿದ್ದು, ತಂತ್ರಜ್ಞಾನದಲ್ಲಿ ಶ್ರೇಷ್ಠತೆ ಸಾಧಿಸಿದ ದೇಶಗಳು ಯಶಸ್ಸನ್ನು ಸಾಧಿಸಿವೆ. ಭಾರತ ಈಗ ವಿಷನ್ ಮೋಡ್‌ನಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಮಾಡುವ ಕೆಲಸ ಮಾಡುತ್ತಿದೆ. ಆರು ವಿಭಿನ್ನ ಸೆಮಿಕಂಡಕ್ಟರ್ ಘಟಕಗಳು ಬರುತ್ತಿದ್ದು, ನಾಲ್ಕು ಹೊಸ ಘಟಕಗಳಿಗೆ ಈಗಾಗಲೇ ಹಸಿರು ನಿಶಾನೆ ನೀಡಲಾಗಿದೆ ಎಂದು ಘೋಷಿಸಿದರು. ಇದನ್ನೂ ಓದಿ: ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್ ಪಾಸ್ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಭಾರತ ಸೆಮಿಕಂಡಕ್ಟರ್ ಮಿಷನ್ (ISM) ಅಡಿಯಲ್ಲಿ ನಾಲ್ಕು ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಟ್ಟು ಸುಮಾರು 4,600 ಕೋಟಿ ರೂ. ಹೂಡಿಕೆಯಲ್ಲಿ ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಈ ಯೋಜನೆಗಳು ತಲೆ ಎತ್ತಲಿವೆ. ಈ ಅನುಮೋದನೆಗಳೊಂದಿಗೆ ಭಾರತವು ಈಗ ಆರು ರಾಜ್ಯಗಳಲ್ಲಿ ಸುಮಾರು 1.60 ಲಕ್ಷ ಕೋಟಿ ರೂ.ಗಳ ಮೌಲ್ಯದ 10 ISM-ಅನುಮೋದಿತ ಯೋಜನೆಗಳನ್ನು ಹೊಂದಿದೆ.
ಈ ಸೌಲಭ್ಯಗಳು ದೇಶೀಯ ಚಿಪ್ ವಿನ್ಯಾಸ ಸಾಮರ್ಥ್ಯಗಳನ್ನು ಹೆಚ್ಚಿಸಿಲಿವೆ. ಮುಖ್ಯವಾಗಿ ದೂರಸಂಪರ್ಕ, ಆಟೋಮೋಟಿವ್, ಡೇಟಾ ಸೆಂಟರ್, ರಕ್ಷಣೆ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲಿವೆ. ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಪರೋಕ್ಷ ಉದ್ಯೋಗದ ಜೊತೆಗೆ ನೇರವಾಗಿ 2,000 ಕ್ಕೂ ಹೆಚ್ಚು ಕೌಶಲ್ಯಪೂರ್ಣ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಸರ್ಕಾರ ಹೇಳಿದೆ.