ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್‌ – ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿ ವರ್ಗಾವಣೆ

Public TV
1 Min Read

ಮಂಡ್ಯ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾತ್ರವೇ ಇಲ್ಲದ ಪೊಲೀಸ್‌ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಅಡಿಷನಲ್ ಎಸ್ಪಿ ತಿಮ್ಮಯ್ಯ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗೃಹ ಇಲಾಖೆ ವರ್ಗಾವಣೆ ಮಾಡಿ ಇನ್ನೂ ಜಾಗ ತೋರಿಸಿಲ್ಲ.

ಮದ್ದೂರು ಪ್ರಕರಣದಲ್ಲಿ ತಿಮ್ಮಯ್ಯಗೆ ಹೆಚ್ಚುವರಿ ಜವಾಬ್ದಾರಿ ನೀಡಿಯೇ ಇರಲಿಲ್ಲ. ಹೀಗಿದ್ದರೂ ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಲ್ಲು ತೂರಾಟ ತಡೆಯಬೇಕಿದ್ದು ಮದ್ದೂರು ಇನ್‌ಸ್ಪೆಕ್ಟರ್‌ ಹಾಗೂ ಇತರ ಪೊಲೀಸರ ಕರ್ತವ್ಯವಾಗಿತ್ತು. ಸೋಮವಾರ ಪ್ರತಿಭಟನೆ ಬಂದೋಬಸ್ತ್ ನೇತೃತ್ವ ವಹಿಸಿದ್ದು ಎಸ್ಪಿ. ಕೇವಲ ಸ್ಥಳದಲ್ಲಿ ಬಂದೋಬಸ್ತ್ ಕೆಲಸ ಮಾಡುತ್ತಿದ್ದವರು ತಿಮ್ಮಯ್ಯ. ಹೀಗಿದ್ದರೂ ಸಹ ಅಮಾಯಕ ಅಧಿಕಾರಿಯನ್ನು ಸರ್ಕಾರ ಬಲಿಪಶು ಮಾಡಿದೆ ಎಂಬ ದೂಷಣೆ ಕೇಳಿಬಂದಿದೆ.

Share This Article