ಕಾಫಿನಾಡಲ್ಲಿ ಮಳೆಯ ಅಬ್ಬರ – ಕೋಡಿ ಬಿದ್ದ ಇತಿಹಾಸ ಪ್ರಸಿದ್ಧ ಮದಗದ ಕೆರೆ

Public TV
1 Min Read

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಭಾರೀ (Rain) ಮಳೆಯಾಗುತ್ತಿದ್ದು, ಕಡೂರು (Kaduru) ತಾಲೂಕಿನ ಇತಿಹಾಸ ಪ್ರಸಿದ್ಧ ಮದಗದ ಕೆರೆ (Madagadakere Lake) ಕೋಡಿ ಬಿದ್ದಿದೆ.

336 ಹೆಕ್ಟೇರ್, 2,036 ಎಕರೆ ವಿಸ್ತೀರ್ಣ ಹಾಗೂ 80 ಅಡಿ ಆಳದ ಈ ಬೃಹತ್ ಕೆರೆ ತುಂಬಿ ಕೋಡಿ ಬಿದ್ದಿರುವುದರಿಂದ ಕಡೂರು ತಾಲೂಕು ಸೇರಿದಂತೆ ಮದಗದ ಕೆರೆ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಳ್ಳಿ ಜನ- ಜಾನುವಾರುಗಳ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಸುತ್ತಮುತ್ತಲಿನ ಸಾವಿರಾರು ಎಕರೆ ತೋಟಗಳಿಗೆ, ಕೃಷಿ ಭೂಮಿಗೆ ನೀರುಣಿಸಲಿದೆ. ಇದನ್ನೂ ಓದಿ: 50 ಲಕ್ಷ ಕಮಿಷನ್‌ ಆರೋಪ; ನನ್ನಿಂದ ವಂಚನೆ ನಡೆದಿಲ್ಲ, ಆರೋಪ ಸುಳ್ಳು – ʻಮಾರ್ಟಿನ್ʼ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟನೆ

ಕಳೆದ 15-20 ದಿನಗಳಿಂದ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆ ಕೋಡಿ ಬಿದ್ದಿದ್ದು, ಸುತ್ತಮುತ್ತಲಿನ ಹಳ್ಳಿಗಳ ರೈತರು ಹಾಗೂ ಜನರ ಸಂಭ್ರಮಕ್ಕೆ ಕಾರಣವಾಗಿದೆ.

ಇಲ್ಲಿ ಕೋಡಿ ಬಿದ್ದ ನೀರು ವೇದಾವತಿ ನದಿ ಸೇರಿ ಹರಿದು, ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಡ್ಯಾಂ ಸೇರಲಿದೆ. ಇನ್ನೂ ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಎಂಬ ಜನಪದರು ಪದ ಕಟ್ಟಿದ್ದು ಇದೇ ಕೆರೆಗೆ. ಇದನ್ನೂ ಓದಿ: ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳಿವೆ: ಪರಮೇಶ್ವರ್

Share This Article