`ಮಾ ಇಂಟಿ ಬಂಗಾರಂ’.. ಸಮಂತಾ ರಗಡ್ ಅವತಾರ..!

1 Min Read

`ಮಾ ಇಂಟಿ ಬಂಗಾರಂ’ (Maa Inti Bangaaram) ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಅಟ್ರ್ಯಾಕ್ಟಿವ್ ನಟಿ ಸಮಂತಾ (Samantha) ವಿಭಿನ್ನ ಶೇಡ್ಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಎರಡು ವಿಭಿನ್ನ ಗೆಟಪ್‍ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಕೂಡಾ ಹಲ್‍ಚಲ್ ಎಬ್ಬಿಸಿದೆ. ಸಮಂತಾ ನಯಾ ಅವತಾರಕ್ಕೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

ಅಂದಹಾಗೆ `ಮಾ ಇಂಟಿ ಬಂಗಾರಂ’ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ ರಾಜ್ ನಿಧಿಮೋರು, ಇನ್ನು ಈ ಸಿನಿಮಾಗೆ ಸಮಂತಾ ಸಹ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ: ವಿಜಯ್‌ಗೆ ಮತ್ತೆ ಶಾಕ್‌ – ಜ.21 ರವರೆಗೆ ‘ಜನನಾಯಗನ್’ ರಿಲೀಸ್‌ ಮಾಡುವಂತಿಲ್ಲ: ಮದ್ರಾಸ್‌ ಹೈಕೋರ್ಟ್‌ ಆದೇಶ

ಈ ಸಿನಿಮಾ ಮಹಿಳಾ ಪ್ರಧಾನವಾಗಿದ್ದು, ಸಮಂತಾ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಮಂತ ಪತಿಯ ಪಾತ್ರದಲ್ಲಿ ನಮ್ಮ ಕನ್ನಡದ ಪ್ರತಿಭೆ ದಿಗಂತ್ ಮಂಚಾಲೆ ನಟಿಸಿದ್ದಾರೆ. ಹಗಲು ಥೇಟ್ ಗೌರಮ್ಮನಂತೆ ಸಮಂತಾ ಕಾಣಿಸಿಕೊಂಡ್ರೆ, ರಾತ್ರಿ ಕಾಳಿಯ ಸ್ವರೂಪ ತಾಳುವ ಸಮಂತಾ ನೋಡಿ ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಸಮಂತಾ ಕರಿಯರ್‍ನಲ್ಲೇ ತುಂಬಾನೇ ವಿಭಿನ್ನವಾದ ಸಿನಿಮಾ `ಮಾ ಇಂಟಿ ಬಂಗಾರಂ’. ಇದನ್ನೂ ಓದಿ: ಇನ್ನೆರಡೇ ದಿನದಲ್ಲಿ ಮನೆಯಿಂದ ಇಬ್ರು ಹೋಗ್ತಾರೆ ಎಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಧ್ರುವಂತ್

Share This Article