ಕಾಂಗ್ರೆಸ್ ಸೇರುತ್ತೇನೆಂದು ನಮ್ಮವರೇ ಅಪಪ್ರಚಾರ ಮಾಡ್ತಿದ್ದಾರೆ: ಎಂ.ಪಿ.ಕುಮಾರಸ್ವಾಮಿ

Public TV
1 Min Read

ಚಿಕ್ಕಮಗಳೂರು: ನಮ್ಮ ಪಕ್ಷದ ಮುಖಂಡರೇ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಸೇರುತ್ತೇನೆಂದು ನಮ್ಮವರೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ಮೂಡಿಗೆರೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ನಮ್ಮ ಒಳಗೆ ಇರುವ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನಾನೇಕೆ ಕಾಂಗ್ರೆಸ್ಸಿಗೆ ಹೋಗಲಿ. ಬಿಜೆಪಿ ಮುಖಂಡರು ನನ್ನನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ನಮ್ಮವರೇ ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದನ್ನ ಜನ ನಂಬುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

bjp - congress

ಸಂಪುಟ ಪುನರ್ ರಚನೆ ಸಮಯದಲ್ಲಿ ಮಾತ್ರ ನನ್ನ ಬಗ್ಗೆ ಹೀಗೆ ಅಪಪ್ರಚಾರ ಮಾಡುತ್ತಾರೆ. ಸಂಪುಟ ಪುನರ್ ರಚನೆಯ ವೇಳೆಯಲ್ಲಿ ಮಾತ್ರ ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಸುದ್ದಿ ಹೊರಬರುತ್ತದೆ. ನಾನು ಸಚಿವ ಸ್ಥಾನ ಹಾಗೂ ಬೋರ್ಡ್‍ಗಾಗಿ ಲಾಭಿ ಮಾಡಿಲ್ಲ. ಆದರೂ ಕೂಡ ಈ ರೀತಿ ಸುದ್ದಿ ಹೊರಬರುತ್ತಿದೆ ಎಂದು ಸ್ವಪಕ್ಷದವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕೋವಿಡ್-19 ಪ್ರಕರಣಗಳು ಏರಿಕೆಯಾಗಿದೆ, ಆದ್ರೆ ಆತಂಕ ಪಡಬೇಡಿ: ಅರವಿಂದ್ ಕೇಜ್ರಿವಾಲ್

ನಮ್ಮೊಳಗೆ ಇರುವವರು ಕಾಂಗ್ರೆಸ್ ಸೇರುವ ಸುದ್ದಿ ಹರಿಬಿಟ್ಟಿದ್ದಾರೆ. ಅಪಪ್ರಚಾರ ಮಾಡುವ ಕೆಲಸವನ್ನ ವಿರೋಧ ಪಕ್ಷದವರಿಗಿಂತ ನಮ್ಮ ಪಕ್ಷದವರೇ ಮಾಡುತ್ತಿದ್ದಾರೆ ಎಂದು ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *