ಸಂಗೀತ ವಿದ್ವಾನ್ ಎಂ.ನಾರಾಯಣಗೆ ಕದ್ರಿ ಸಂಗೀತ ಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ

Public TV
2 Min Read

ಮಂಗಳೂರು: ಡಾ.ಕದ್ರಿ ಗೋಪಾಲನಾಥ್ (Kadri Gopalnath) ಅಕಾಡೆಮಿ ಫಾರ್ ಆರ್ಟ್ಸ್‌ (ರಿ) ಆಶ್ರಯದಲ್ಲಿ ಡಿ. 6 ಇಂದು ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ 73ನೇ ಜನ್ಮ ಜಯಂತಿಯ ಪ್ರಯುಕ್ತ ಕದ್ರಿ ಸಂಗೀತ ಸೌರಭ 2022 ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಕದ್ರಿ ಸಂಗೀತ ಸೌರಭ ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಗೆ (Award) ಸಂಗೀತ ವಿದ್ವಾನ್ ಎಂ.ನಾರಾಯಣ (M.Narayan) ಅವರನ್ನು ಆಯ್ಕೆ ಮಾಡಲಾಗಿದೆ.

ಮೂಡಬಿದ್ರೆಯಲ್ಲಿ ಜನಿಸಿದ ಎಂ.ನಾರಾಯಣ ಅವರು ಒಬ್ಬ ಅಪ್ರತಿಮ ಕಲಾವಿದರು. ಪ್ರಸ್ತುತ ಸುರತ್ಕಲ್ ನ ಶ್ರೀಗಣೇಶ್ ಸಂಗೀತ ಮತ್ತು ನೃತ್ಯ ಕಲಾಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಸಂಗೀತ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ. ಓರ್ವ ಖ್ಯಾತ ಸಂಗೀತ ರಚನಕಾರರಾಗಿರುವ ಇವರು ನಾರಾಯಣದಾಸ ನಾಮಾಂಕಿತದಲ್ಲಿ ಈವರೆಗೆ ವಿವಿಧ ರಾಗ ತಾಳಗಳಲ್ಲಿ 25 ಜತಿ ಸ್ವರಗಳು, 75 ತಾಣ ವರ್ಣಗಳು, 4 ಸ್ವರ ಜತಿಗಳು, 200 ಕೃತಿಗಳು ಹಾಗೂ 15 ತಿಲ್ಲಾನಗಳನ್ನು ಕನ್ನಡ, ತೆಲುಗು ಹಾಗೂ ಸಂಸ್ಕೃತದಲ್ಲಿ ರಚಿಸಿದ್ದಾರೆ. ಇದನ್ನೂ ಓದಿ: ವಾಯುಭಾರ ಕುಸಿತ – ನಾಳೆಯಿಂದ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಶುರು

72 ಮೇಳಕರ್ತ ರಾಗಗಳಲ್ಲೂ ಕೂಡ ಕೃತಿ ರಚನೆ ಮಾಡಿರುವ ಕರ್ನಾಟಕದ ಕೆಲವೇ ಕೆಲವು ರಚನಕಾರರಲ್ಲಿ ಇವರು ಒಬ್ಬರು. ಎಂ.ನಾರಾಯಣ ಶ್ರೀಮಹಾಗಣಪತಿಯ ಮೇಲೆ 47 ಕೃತಿಗಳ ರಚನೆ ಮಾಡಿದ್ದಾರೆ. ಇದೀಗ ನಾರಾಯಣ ಅವರ ಅಪರಿಮಿತ ಸಾಧನೆಯನ್ನು ಗುರುತಿಸಿ ಡಾ.ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್‌ ವತಿಯಿಂದ ಕದ್ರಿ ಸಂಗೀತ ಸೌರಭ 2022ರ ಜೀವಮಾನ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 50,000 ನಗದು ಹಾಗೂ ಬೆಳ್ಳಿಯ ಫಲಕ ಹೊಂದಿದೆ. 2022ರ ಡಿಸೆಂಬರ್ 6 ಇಂದು ಸಂಜೆ 5:30ಕ್ಕೆ ಮಂಗಳೂರು ಉರ್ವಸ್ಟೋರ್ ಬಳಿಯ ಇರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಡಾ.ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್‌(ರಿ)ನ ಪ್ರಧಾನ ಕಾರ್ಯದರ್ಶಿ ಕದ್ರಿ ಮಣಿಕಾಂತ್ ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರ ಶಾರೀಕ್‍ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *