ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಬಂದ್ರೆ 100% ಆರ್‌ಎಸ್‌ಎಸ್‌ ಬ್ಯಾನ್‌: ಎಂ. ಲಕ್ಷ್ಮಣ್‌

Public TV
1 Min Read

– ವೋಟ್‌ ಚೋರಿ ಮೂಲಕ ಚುನಾವಣೆ ಗೆಲ್ಲಿಸ್ತಿರೋದೇ ಆರ್‌ಎಸ್‌ಎಸ್‌
– ಇಡೀ ದೇಶವನ್ನೇ ಹಾಳು ಮಾಡ್ತಿರೋದೇ ಆರ್‌ಎಸ್‌ಎಸ್‌ ಅಂತ ಲೇವಡಿ

ಮಡಿಕೇರಿ: ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬಂದ್ರೆ 100% ಆರ್‌ಎಸ್‌ಎಸ್‌ ಬ್ಯಾನ್‌ ಮಾಡಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ (M Lakshman) ಹೇಳಿದರು.

ಮಡಿಕೇರಿ ನಗರದಲ್ಲಿ (Madikeri City) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್‌ ಅವರು ಕರಿ ಟೋಪಿ ಎಂದು ಕರೆದಿದ್ದಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

ಆರ್‌ಎಸ್‌ಎಸ್‌ ಏನು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಸಂಘನಾ? ಮಹಾತ್ಮಗಾಂಧಿಯನ್ನು ಕೊಂದ ಸಂಘ ಅದು. ಇಡೀ ದೇಶದಲ್ಲಿ ಕೋಮುಗಲಭೆ ಹರಿಸುತ್ತಿರುವ ಒಂದು ಸಂಸ್ಥೆ. ಆ ಸಂಸ್ಥೆಯನ್ನು ಬ್ಯಾನ್‌ ಮಾಡುವ ಕೆಲಸವನ್ನು ಕಾಂಗ್ರೆಸ್‌ ಪಕ್ಷ ಮಾಡಬೇಕಿತ್ತು. ಆದ್ರೆ ಆಗಲಿಲ್ಲ. ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ನೂರಕ್ಕೆ ನೂರರಷ್ಟು ಬ್ಯಾನ್‌ ಆಗುತ್ತೆ. ಬ್ಯಾನ್‌ ಮಾಡಿದ್ರೆ ನಮ್ಮ ದೇಶದಲ್ಲಿ ಶಾಂತಿಯುತ ಬಾಳ್ವೆ ಮಾಡುವ ಅವಕಾಶ ಸಿಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಈ ಪ್ರತಾಪ್ ಸಿಂಹ ಯಾರ್ರೀ, ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ: ಯತೀಂದ್ರ ಸಿದ್ದರಾಮಯ್ಯ

ಚುನಾವಣೆಗಳನ್ನ ವೋಟ್‌ ಚೋರಿ ಮೂಲಕ ಗೆಲ್ಲುವಂತಹ ಕೆಲಸ ಮಾಡುತ್ತಿರುವುದೇ ಆರ್‌ಎಸ್‌ಎಸ್‌. ಅಂಥವರನ್ನ ಚಡ್ಡಿ, ಟೋಪಿ ಹಾಕಿರುವಂತಹ ವ್ಯಕ್ತಿಯನ್ನ ಕರಿಟೋಪಿ, ಕಳ್ಳ ಅಂತ ಕರೆದರೂ ಒಪ್ಪಿಕೊಳ್ತೇನೆ. ಇಡೀ ದೇಶವನ್ನ ಹಾಳು ಮಾಡ್ತಿರೋದೇ ಆರ್‌ಎಸ್‌ಎಸ್‌. ಇದು ತೊಲಗಬೇಕು ಅಂತ ರಾಹುಲ್‌ ಗಾಂಧಿ ಅವರು ದಿನನಿತ್ಯ ಹೋರಾಟ ಮಾಡ್ತಿದ್ದಾರೆ. ಅದೆಲ್ಲದಕ್ಕೂ ನಮ್ಮ ಬೆಂಬಲ ಇದೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

Share This Article