ವಿಜಯಪುರ: ಮಳೆಯಿಂದ ನಷ್ಟ ಅನುಭವಿಸಿದ ನಗರದ ಎರಡು ಕುಟುಂಬಗಳಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದಾರೆ.ಇದನ್ನೂ ಓದಿ: ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ
ವಿಜಯಪುರ ನಗರದಲ್ಲಿ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಸಚಿವರು ಆಗಸ್ಟ್ 15ರಂದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಅಂದು ರಾಮನಗರ ಬಳಿಯ ನೆಹರು ನಗರ ನಿವಾಸಿ ಅಚ್ಯುತ್ ಆಚಾರ ಪುರೋಹಿತ ಮತ್ತು ರಾಜಾಜಿನಗರದ ನಿವಾಸಿ ಜಾಫರ್ ಅಹ್ಮದ್ ಇನಾಮದಾರ ಅವರ ಕುಟುಂಬಕ್ಕೆ ತಲಾ ರೂ. 50 ಸಾವಿರ ವೈಯಕ್ತಿಕ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಸಚಿವರು ಇದೀಗ ಎರಡೂ ಕುಟುಂಬಗಳಿಗೆ ತಲಾ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ. ಸಚಿವರು ನೀಡಿದ ಹಣವನ್ನು ಕೆಪಿಸಿಸಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಮತ್ತು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಅವರು ಇಂದು ಎರಡೂ ಕುಟುಂಬಗಳಿಗೆ ತಲುಪಿಸಿದರು.ಇದನ್ನೂ ಓದಿ: ಭಾರತಕ್ಕೆ 5% ರಿಯಾಯಿತಿಯಲ್ಲಿ ತೈಲ ಪೂರೈಕೆ: ರಷ್ಯಾ