ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿ (Magadi Road) ಮನಸೋ ಇಚ್ಛೆ ಮಾರ್ಪಡಿಸಿದ ಐಷಾರಾಮಿ ಕಾರೊಂದು ಪತ್ತೆಯಾಗಿದೆ.
ವ್ಯಕ್ತಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮನಸೋ ಇಚ್ಛೆ ಕಾರನ್ನು ಮಾರ್ಪಡಿಸಿದ್ದಲ್ಲದೇ ಸೈಲೆನ್ಸರ್ ಮತ್ತು ನಂಬರ್ ಪ್ಲೇಟ್ ಇಲ್ಲದೇ ಬೆಂಗಳೂರಿನ (Bengaluru) ಮಾಗಡಿ ರಸ್ತೆಯ ಪಕ್ಕದಲ್ಲಿ ವಾಹನ ಚಲಾಯಿಸಿರುವುದು ಕಂಡುಬಂದಿದೆ.ಇದನ್ನೂ ಓದಿ: ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಶಿಫ್ಟ್ – ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ: ಸಿಎಂ
ದೂರು ನೀಡುತ್ತಿದ್ದಂತೆ ಮಾಗಡಿ ರಸ್ತೆ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದು, ವಾಹನವನ್ನು ವಶಕ್ಕೆ ಪಡೆದಕೊಂಡಿದ್ದಾರೆ. ಸದ್ಯ ಪೊಲೀಸರು ವಾಹನವನ್ನು ಮುಂದಿನ ಕ್ರಮಕ್ಕಾಗಿ ಆರ್ಟಿಒಗೆ ಹಸ್ತಾಂತರಿಸಿದ್ದಾರೆ.
ಸಾರ್ವಜನಿಕರ ಸಹಕಾರದಿಂದ ಸಂಚಾರಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಮಾರ್ಪಡಿಸಿದ ಸೈಲೆನ್ಸರ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಎಸ್.ಜಿ.ನಂಜಯ್ಯನಮಠ

