ಐಷಾರಾಮಿ ಕಾರು ಹೊಂದಿರುವವರು ಎಚ್ಚರ – ಮೈಸೂರಿನಲ್ಲಿ ಸಕ್ರಿಯವಾಗಿದೆ ಹೈಟೆಕ್ ಕಳ್ಳರ ಗ್ಯಾಂಗ್

Public TV
1 Min Read

ಮೈಸೂರು: ಐಷಾರಾಮಿ ಕಾರು (Luxury Car) ಹೊಂದಿರುವ ಮಾಲೀಕರು ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಐಷಾರಾಮಿ ಕಾರನ್ನು ಕದಿಯುವ ಗ್ಯಾಂಗ್‌ವೊಂದು ಮೈಸೂರಿನಲ್ಲಿ (Mysuru) ಸಕ್ರಿಯವಾಗಿದ್ದು, ರಾತ್ರೋರಾತ್ರಿ ಮನೆಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳು ಮಂಗಮಾಯವಾಗುತ್ತಿವೆ.

ಈ ಗ್ಯಾಂಗ್‌ಗೆ ಉದ್ಯಮಿಗಳು, ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳ ಮನೆಗಳೇ ಟಾರ್ಗೆಟ್. ಒಂದು ತಿಂಗಳ ಅವಧಿಯಲ್ಲಿ ಒಂದೇ ಏರಿಯಾದಲ್ಲಿ 3 ಐಷಾರಾಮಿ ಕಾರುಗಳ ಕಳ್ಳತನವಾಗಿದೆ. ಮೈಸೂರಿನ ವಿಜಯನಗರ, ನಿವೇದಿತಾ ನಗರದಲ್ಲಿ ಮನೆಮುಂದೆ ನಿಲ್ಲಿಸಿದ್ದ ಕಾರುಗಳನ್ನು ಕಳ್ಳತನ (Theft) ಮಾಡಲಾಗಿದ್ದು, 2 ಇನ್ನೋವಾ ಹಾಗೂ 1 ಫಾರ್ಚುನರ್ ಕಾರು ಕಳುವಾಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ

ಸಂತೋಷ್ ಎಂಬವರ ಫಾರ್ಚುನರ್ (Fortuner) ಕಳುವಾಗಿದ್ದು, ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೋವಾ ಕ್ರಿಸ್ಟಾ (Innova Crysta) ಕಾರು ಕಳುವಾಗಿದೆ. ಅಲ್ಲದೇ ನಿರ್ಮಿತಿ ಕೇಂದ್ರದ ನಿವೃತ್ತ ನಿರ್ದೇಶಕ ಮಂಜುನಾಥ್ ಅವರ ಮನೆಮುಂದೆ ನಿಲ್ಲಿಸಿದ್ದ ಇನ್ನೋವಾ ಕ್ರಿಸ್ಟಾ ಕಾರು ಕಳ್ಳತನವಾಗಿದ್ದು, ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ಇದ್ದರೂ ಸಹ ಈ ಹೈಟೆಕ್ ಕಳ್ಳರ ಸುಳಿವು ಸಿಗದೇ ಇರುವುದು ಮೈಸೂರು ಪೊಲೀಸರಿಗೆ ತಲೆ ನೋವಾಗಿದೆ. ಇದನ್ನೂ ಓದಿ: ಯುವಕರ ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತಿದ್ದ ಪಿಎಫ್‍ಐ ಮುಖಂಡ ಬಳ್ಳಾರಿಯಲ್ಲಿ ಅರೆಸ್ಟ್

 

Share This Article