ಇಂದು ರಾತ್ರಿ ಕೇತುಗ್ರಸ್ಥ ರಕ್ತಚಂದ್ರಗ್ರಹಣ – ಬೆಂಗ್ಳೂರು ಸೇರಿ ರಾಜ್ಯದಲ್ಲಿ ಕಾಣೋದು ಅನುಮಾನ

Public TV
1 Min Read

ಬೆಂಗಳೂರು: ಇಂದು ಗುರು ಪೂರ್ಣಿಮೆ ಜೊತೆಗೆ ಕೇತುಗ್ರಸ್ಥ ರಕ್ತಚಂದ್ರಗ್ರಹಣ. ಹೀಗಾಗಿ ಇಂದು ರಾತ್ರಿ 11.44ರಿಂದ ನಸುಕಿನ ಜಾವ 3.49ರರೆಗೂ ಚಂದ್ರಗ್ರಹಣ ಇರಲಿದ್ದು, ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದೇ ಬಣ್ಣಿಸಲಾಗಿದೆ.

ಈ ಗ್ರಹಣದ ಅವಧಿಯಲ್ಲಿ ಚಂದ್ರಬಿಂಬ ಕೆಂಬಣ್ಣಕ್ಕೆ ತಿರುಗಲಿದೆ. ಹೀಗಾಗಿ ಇದನ್ನ ರಕ್ತಚಂದ್ರಗ್ರಹಣ ಎಂದು ಬಿಂಬಿಸಲಾಗ್ತಿದೆ. ಗ್ರಹಣದ ವೇಳೆ ಮಂಗಳ ಗ್ರಹ ಭೂಮಿಗೆ ನಿಕಟವಾಗಲಿದ್ದು, ಬುಧ ಗ್ರಹ ತನ್ನ ಕಕ್ಷೆಯಿಂದ ದೂರ ಸರಿಯಲಿದೆ. ಇದು ಖಗೋಳದ ಈ ಸಜಹ ಪ್ರಕ್ರಿಯೆ ಅಂತ ಗೊತ್ತಿದ್ದರೂ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಶುಕ್ರವಾರ ಚಂದ್ರಗ್ರಹಣ : ಯಾವ ರಾಶಿಯವರಿಗೆ ಏನಾಗುತ್ತೆ? ಇಲ್ಲಿದೆ ವಿವರ

ಇದ್ರಿಂದ ಕೆಡುಕುಂಟಾಗುತ್ತೆ ಅಂತ ಭಯಗೊಂಡಿದ್ದಾರೆ. ತಿರುಪತಿ ತಿಮ್ಮಪ್ಪನ ದೇಗುಲ ಸೇರಿದಂತೆ ಕೆಲ ದೇಗುಲಗಳನ್ನ ಗ್ರಹಣಕ್ಕೂ ಮುನ್ನ ಮುಚ್ಚಲಾಗುತ್ತಿದೆ. ಆದ್ರೆ ಧರ್ಮಸ್ಥಳ ಮಂಜುನಾಥ ಸೇರಿದಂತೆ ಹಲವು ದೇಗುಲಗಳು ಓಪನ್ ಇರಲಿವೆ. ಅಂದ ಹಾಗೇ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮೋಡ ಮುಚ್ಚಿದ ವಾತಾವರಣ ಇರೋದ್ರಿಂದ ಚಂದ್ರಗ್ರಹಣ ಗೋಚರವಾಗೋದು ಅನುಮಾನ. ಆದ್ರೂ ನೆಹರೂ ತಾರಾಲಯದಲ್ಲಿ ರಾತ್ರಿ ಗ್ರಹಣ ವೀಕ್ಷಣೆಗೆ ತಯಾರಿ ನಡೆದಿದೆ. ಇದನ್ನೂ ಓದಿ: ಚಂದ್ರ ಗ್ರಹಣ- ದೇವಾಲಯಗಳ ಪೂಜಾಕೈಂಕರ್ಯದ ಸಂಪೂರ್ಣ ವಿವರ ಇಲ್ಲಿದೆ

Share This Article
Leave a Comment

Leave a Reply

Your email address will not be published. Required fields are marked *