ರಕ್ತಚಂದ್ರಗ್ರಹಣ – ಬೀದರ್‌ನ ಐತಿಹಾಸಿಕ 9 ದೇವಸ್ಥಾನಗಳ ಬಾಗಿಲು ಬಂದ್

By
1 Min Read

ಬೀದರ್: ಇಂದು ವರ್ಷದ ಕೊನೆಯ ಚಂದ್ರಗ್ರಹಣ (Lunar Eclipse) ಹಿನ್ನೆಲೆ ಗಡಿಜಿಲ್ಲೆ ಬೀದರ್‌ನ (Bidar) ಐತಿಹಾಸಿಕ 9 ದೇವಸ್ಥಾನಗಳ ಬಾಗಿಲು ಬಂದ್ ಆಗಿದೆ.

ಜಿಲ್ಲೆಯ ಐತಿಹಾಸಿಕ ದೇವಾಲಯಗಳಾದ ಶ್ರೀ ನರಸಿಂಹ ಝರಣಿ, ಮೈಲಾರ ಮಲ್ಲಣ್ಣ, ಹೊನ್ನಿಕೇರಿ ಸಿದ್ದೇಶ್ವರ, ಚಾಂಗಲೇರ್ ವೀರಭದ್ರೇಶ್ವರ ಸೇರಿದಂತೆ ಒಟ್ಟು 9 ದೇವಸ್ಥಾನಗಳ ಬಾಗಿಲುಗಳು ಬಂದ್ ಆಗಿವೆ. ಭಾನುವಾರ (ಸೆ.7) ಮಧ್ಯಾಹ್ನ 12 ಗಂಟೆಗೆ ವೇದಕಾಲ ಪ್ರಾರಂಭವಾಗಿದ್ದು, ಇದೇ ಸಮಯದಲ್ಲಿ 9 ದೇವಸ್ಥಾನಗಳ ಬಾಗಿಲುಗಳನ್ನು ಬಂದ್ ಮಾಡಲಾಗಿದೆ.ಇದನ್ನೂ ಓದಿ: ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್

ಇನ್ನೂ ಇಂದು ಮಧ್ಯಾಹ್ನ 12 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಸೋಮವಾರ (ಸೆ.8) ಬೆಳಗ್ಗೆ 8 ಗಂಟೆಗೆ ದೇವಸ್ಥಾನಗಳ ಬಾಗಿಲು ತೆರೆಯಲಿದ್ದು, ಬಳಿಕ ಗೋಮೂತ್ರದಿಂದ ದೇವಸ್ಥಾನ ಶುದ್ಧೀಕರಣಗೊಳಿಸಿ, ವಿಶೇಷ ಪೂಜೆ ಮಾಡಲಾಗುತ್ತದೆ. ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಿದ್ದಾರೆ.

ಬಾಗಿಲು ಬಂದ್ ಮಾಡುವ ಮುನ್ನ ವಿಶೇಷ ಪೂಜೆ ಮತ್ತು ಹಾಲಿನ ಅಭಿಷೇಕ ಮಾಡಿ ಮಹಾರಾಷ್ಟ್ರ, ತೆಲಂಗಾಣ ಹಾಗೂ ರಾಜ್ಯದಿಂದ ಬಂದಿದ್ದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿದ್ದರು.ಇದನ್ನೂ ಓದಿ: ಇಂದು ವರ್ಷದ ಕೊನೆಯ ಗ್ರಹಣ; ಮಧ್ಯಾಹ್ನವೇ ದೇವಾಲಯಗಳು ಬಂದ್

Share This Article