ಸೂರ್ಯಗ್ರಹಣ ಬೆನ್ನಲ್ಲೇ ಚಂದ್ರಗ್ರಹಣ – ನಾಳೆ ಗೋಚರವಾಗಲಿದೆ ತೋಳ ಚಂದ್ರಗ್ರಹಣ

Public TV
2 Min Read

ಬೆಂಗಳೂರು: ಗ್ರಹಣ ಅಂದೆ ಜನರಲ್ಲಿ ಒಂದಷ್ಟು ಆತಂಕ, ಪ್ರಶ್ನೆಗಳು ಮೂಡುತ್ತದೆ. ಗ್ರಹಣ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಆತಂಕ ಕೂಡ ಕಾಡುತ್ತದೆ. ಗ್ರಹಣ ಸಮಯದಲ್ಲಿ ಯಾವ ನಿಯಮ ಪಾಲಿಸಬೇಕು. ಗ್ರಹಣದ ಅಪಾಯದಿಂದ ಪಾರಾಗೋದು ಹೇಗೆ?.. ಹೀಗೆ ನಾನಾ ಪ್ರಶ್ನೆಗಳು ಉದ್ಭವಿಸೋದು ಸಹಜವಾಗಿದ್ದು, ಈ ಪ್ರಶ್ನೆಗಳಿಗೆಲ್ಲ ಉತ್ತರ ಇಲ್ಲಿದೆ.

2019ರ ವರ್ಷಾಂತ್ಯದ ಸೂರ್ಯಗ್ರಹಣದ ಭಯದಿಂದ ಹೊರ ಬರುವ ಮುನ್ನವೇ 20 ದಿನಗಳಲ್ಲಿ ಮತ್ತೆ ಚಂದ್ರಗ್ರಹಣ ಎದುರಾಗಿದೆ. ಈ ಚಂದ್ರಗ್ರಹಣ ಅಪಾಯಕಾರಿ ಅಂತ ಹೇಳಲಾಗುತ್ತಿದೆ. ಯಾಕೆಂದರೆ ಈ ಬಾರಿಯ ಚಂದ್ರಗ್ರಹಣ ಅರೆನೆರಳಿನಿಂದ ಕೂಡಿರಲಿದ್ದು, ನಾಳೆ ಮಧ್ಯರಾತ್ರಿ 10.30 ರಿಂದ ನಾಡಿದ್ದು ರಾತ್ರಿ 2.35ರವರೆಗೂ ಗೋಚರಿಸಲಿದೆ. ಹಾಗಾಗಿ ಗ್ರಹಣ ಸಮಯದಲ್ಲಿ ಕೆಲವೊಂದು ಎಚ್ಚರಿಕೆ ಕ್ರಮಗಳನ್ನ ಅನುಸರಿಸಿದ್ರೆ ಒಳ್ಳೆಯದು ಎಂಬುದು ಜ್ಯೋತಿಷಿಗಳ ಅಭಿಪ್ರಾಯವಾಗಿದೆ.

ಗ್ರಹಣ ಎಷ್ಟೊತ್ತಿಗೆ ಗೋಚರಿಸುತ್ತೆ..? ಎಷ್ಟೋತ್ತಿಗೆ ಮುಗಿಯುತ್ತೆ..?
ಗ್ರಹಣದ ದಿನ : ಶುಕ್ರವಾರ
ಗೃಹಣದ ಸಮಯ: ರಾತ್ರಿ 10.30 ರಿಂದ 2.35 ರ ತನಕ
ಗ್ರಹಣ ಗೋಚರಿಸುವ ಒಟ್ಟು ಸಮಯ: 4 ಗಂಟೆ 5 ನನಗರಗಳು
ಗೋಚರಿಸುವ ಸ್ಥಳಗಳು:  ಏಷ್ಯಾ, ಆಫ್ರೀಕಾ, ಯುರೂಪ್, ಆಸ್ಟ್ರೇಲಿಯಾ ಮತ್ತು ಭಾರತದ ಎಲ್ಲಾ ನಗರಗಳು

ಶಾಸ್ತ್ರಗಳು ಹೇಳುವ ಪ್ರಕಾರ ಗ್ರಹಣ ಸಮಯಕ್ಕೂ ಮುನ್ನ ಮತ್ತು ಗ್ರಹಣ ಸಮಯದಲ್ಲಿ ಕೆಲ ಎಚ್ಚರಿಕೆ ಕ್ರಮಗಳನ್ನು ಅನುರಿಸೋದು ಒಳ್ಳೆಯದು ಎಂದು ಹೇಳಲಾಗುತ್ತಿದೆ.

ಗ್ರಹಣಕ್ಕೂ ಮುನ್ನ ಏನು ಮಾಡಬೇಕು..?
* ಶಿವನ ಪ್ರಾರ್ಥನೆ ಮಾಡಬೇಕು
* ಮನೆ ಸುತ್ತ ಹಾಲು ಅಥವಾ ಮೊಸರನ್ನ ಚೆಲ್ಲುವುದು
* ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು
* ಮನೆಯ ವಾಸ್ತುಗಳಿಗೆ ದರ್ಬೆ ಹಾಕಬೇಕು
* ಸ್ನಾನ ಮಾಡಬೇಕು
* ಗರ್ಭಿಣಿಯರು ಊಟ ಮಾಡಬೇಕು

* ಗ್ರಹಣ ಸಮಯದಲ್ಲಿ ಏನು ಮಾಡಬಾರದು..?
* ದೇವಸ್ಥಾನಗಳಿಗೆ ಭೇಟಿ ಕೊಡಬಾರದು
* ಸ್ನಾನ ಮಾಡಬಾರದು
* ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು
* ಊಟ ಮಾಡಬಾರದು

ಒಟ್ಟಿನಲ್ಲಿ ಗ್ರಹಣ ಸಮಯದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದರಿಂದಾಗುವ ಅಪಾಯಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನೋದು ಜ್ಯೋತಿಷಿಗಳ ಅಭಿಪ್ರಾಯ ಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *