ಭಾರತ್ ಮಾತಾ ಮಹಾ ಆರತಿ ಕಾರ್ಯಕ್ರಮದಲ್ಲಿ ಹೊತ್ತಿ ಉರಿದ ಬೋಟ್‌ – ಅದೃಷ್ಟವಶಾತ್ 15 ಜನ ಪಾರು

Public TV
0 Min Read

ಹೈದರಾಬಾದ್‌: ಇಲ್ಲಿನ (Hyderabad) ನೆಕ್ಲೇಸ್ ರಸ್ತೆಯ ಪೀಪಲ್ಸ್ ಪ್ಲಾಜಾದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಮಾತಾ ಮಹಾ ಆರತಿ’ (Bharat Mata Maha Aarti) ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಬೋಟ್‌ಗಳು ಹೊತ್ತಿ ಉರಿದಿದ್ದು,‌ ಅದೃಷ್ಟವಶಾತ್ 15 ಜನ ಪಾರಾಗಿದ್ದಾರೆ.

ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಅವಘಡ (Fire Accident) ಸಂಭವಿಸಿದಾಗ ದೋಣಿಗಳಲ್ಲಿ 15 ಜನರಿದ್ದರು. ಅವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಬೆಂಕಿ ಒಂದು ದೋಣಿಯಿಂದ ಮತ್ತೊಂದು ದೋಣಿಗೆ ಹಬ್ಬಿ ಎರಡೂ ದೋಣಿಗಳಿಗೆ ತೀವ್ರ ಹಾನಿಯಾಗಿದೆ ಎಂದು ವರದಿಯಾಗಿದೆ.

Share This Article