ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿದ! ವೈದ್ಯರು ಹೇಳಿದ್ದು ಏನು?

Public TV
1 Min Read

ಲಕ್ನೋ: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್ ಬಳಸುತ್ತಾರೆ. ಕಾಂಡೋಮ್ ಬಳಕೆಯಿಂದಾಗಿ ಜನನ ನಿಯಂತ್ರಣ ಸೇರಿದಂತೆ ಹಲವು ಪ್ರಯೋಜನಗಳಿವೆ. ಆದ್ರೆ ಲಕ್ನೋನಲ್ಲಿ ವ್ಯಕ್ತಿಯೊಬ್ಬ ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಕೆಲವೊಂದು ಸಾರಿ ಎಷ್ಟೇ ಉಪಯುಕ್ತ ವಸ್ತುಗಳನ್ನು ಬಳಸಿದರೂ ಅವುಗಳಿಂದ ಅಪಾಯ ಮಾತ್ರ ತಪ್ಪಲ್ಲ. ಲಕ್ನೋ ನಗರದ ವ್ಯಕ್ತಿಯೊಬ್ಬರು ಎಕ್ಸಟೆಂಡ್ ಪ್ಲೆಸರ್ (extended pleasure) ಕಾಂಡೋಮ್ ಬಳಸಿದ್ದಾರೆ. ಕಾಂಡೋಮ್ ನಲ್ಲಿ ಬಳಕೆ ಮಾಡಲಾದ ರಾಸಾಯನಿಕ(ಕೆಮಿಕಲ್)ನಿಂದ ವ್ಯಕ್ತಿಗೆ ಅಲರ್ಜಿ ಉಂಟಾಗಿದೆ. ಇದೇ ಅಲರ್ಜಿಯಿಂದಾಗಿ ವ್ಯಕ್ತಿಯ ಮರ್ಮಾಂಗ ಸಂಪೂರ್ಣ ಕಪ್ಪು ಬಣ್ಣಕ್ಕೆ ಬದಲಾಗಿ ಊತ ಕಾಣಿಸಿಕೊಂಡಿದೆ. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

ಕೂಡಲೇ ಆ ವ್ಯಕ್ತಿಯನ್ನು ನಗರದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಡಾ. ಆಶೀಷ್ ಶರ್ಮಾ ವೈದ್ಯರ ತಂಡ ವ್ಯಕ್ತಿಗೆ ಚಿಕಿತ್ಸೆಯನ್ನು ನೀಡುತ್ತಿದೆ. ವ್ಯಕ್ತಿಗೆ ಯಾವುದೇ ಕೆಮಿಕಲ್‍ನಿಂದ ಅಲರ್ಜಿ ಆಗಿರೋದು ಕಂಡು ಬಂದಿಲ್ಲ. ವ್ಯಕ್ತಿಯ ಮರ್ಮಾಂಗದಲ್ಲಿ ಗ್ಯಾಂಗ್ರಿನ್ ಆಗಿದೆ. ಸದ್ಯ ಕೆಲವು ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಿದ್ದೇವೆ ಎಂದು ಡಾ. ಆಶೀಷ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸೇರಿದೆಯಾ? ಪೂನಂ Just asking

ಆ್ಯಂಟಿಬೊಟಿಕ್ (antibiotics) ನೀಡುವ ಮೂಲಕ ವ್ಯಕ್ತಿಯ ಮರ್ಮಾಂಗದಲ್ಲಿಯ ಊತ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಮೂರು ವಾರಗಳ ಚಿಕಿತ್ಸೆಯ ಬಳಿಕ 6 ತಿಂಗಳ ನಂತರ ವ್ಯಕ್ತಿ ಸಂಪೂರ್ಣ ಗುಣಮುಖವಾಗಲಿದ್ದಾರೆ. 6 ತಿಂಗಳ ನಂತರ ಆತನಿಗೆ ಮೂತ್ರ ವಿಸರ್ಜನೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು ಯಾವುದೇ ಅಡೆತಡೆ ಇರಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ‘ಕಾಂಡೋಮ್ ಚಾಲೆಂಜ್’ ಟ್ರೈ ಮಾಡ್ಬೇಡಿ!

1996ರಲ್ಲಿ ಮೊದಲ ಬಾರಿಗೆ ಕಾಂಡೋಮ್ ಅಲರ್ಜಿಗೆ ತುತ್ತಾದ ಪ್ರಕರಣ ಬೆಳಕಿಗೆ ಬಂದಿತ್ತು. ಅದಾದ ಬಳಿಕ ಇದೂವರೆಗೂ ಇಂತಹ 4 ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಮಾಧ್ಯಮಗಳು ಪ್ರಕಟಿಸಿವೆ. ಇದನ್ನೂ ಓದಿ: ಒಲಿಂಪಿಕ್ಸ್ ಪಂದ್ಯಾವಳಿಗೆ ಪೂರೈಕೆ ಆಯ್ತು 1 ಲಕ್ಷಕ್ಕೂ ಅಧಿಕ ಕಾಂಡೋಮ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *