ಕೊಲೆಗೈದು ಮಹಿಳೆ ಶವದ ಮೇಲೆ ರೇಪ್ – ವಿಡಿಯೋ ಸೆರೆಹಿಡಿದ ವಿಕೃತಕಾಮಿ ಅರೆಸ್ಟ್

Public TV
2 Min Read

– ಮನೆಗೆ ನುಗ್ಗಿ ಪತಿಯನ್ನು ಕಲ್ಲಿಂದ ಜಜ್ಜಿ ಕೊಂದ
– ದಂಪತಿಯ ಮಗಳ ಮೇಲೂ ಅತ್ಯಾಚಾರ
– ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ

ಲಕ್ನೋ: ವಿಕೃತಕಾಮಿಯೋರ್ವ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಕೊಲೆ ಮಾಡಿ ಮಹಿಳೆ ಶವದ ಮೇಲೆ ಅತ್ಯಾಚಾರವೆಸೆಗಿದ್ದಲ್ಲದೆ, ಅವರ 10 ವರ್ಷದ ಮಗಳನ್ನು ರೇಪ್‍ಗೈದ ಭಯಾನಕ ಪ್ರಕರಣ ಉತ್ತರ ಪ್ರದೇಶದ ಅಜಮ್‍ಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ನಾಸಿರುದ್ಧೀನ್(38) ಎಂದು ಗುರುತಿಸಲಾಗಿದೆ. ಈತ ನವೆಂಬರ್ 24ರಂದು ಮುಬಾರಕ್‍ಪುರ ಪ್ರದೇಶದಲ್ಲಿನ ಮನೆಯೊಂದಕ್ಕೆ ನುಗ್ಗಿ ದಂಪತಿ ಹಾಗೂ ಅವರ 4 ತಿಂಗಳ ಮಗನನ್ನು ಕಲ್ಲಿಂದ ಜಜ್ಜಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಅಲ್ಲದೆ ದಂಪತಿಯ 10 ವರ್ಷದ ಮಗಳ ಮೇಲೆ ರೇಪ್ ಮಾಡಿ, ಮಹಿಳೆಯ ಮೃತದೇಹದ ಮೇಲೆ 3 ಗಂಟೆ ಸತತವಾಗಿ ಅತ್ಯಾಚಾರಗೈದು, ದಂಪತಿಯ ಇನ್ನಿಬ್ಬರು ಮಕ್ಕಳನ್ನು ಕೊಲ್ಲಲು ಯತ್ನಿಸಿದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದನು. ಇದನ್ನೂ ಓದಿ: ಮಲಗಿದ್ದ ಮಕ್ಕಳ ಕತ್ತು ಹಿಸುಕಿ ಕೊಂದು 8ನೇ ಮಹಡಿಯಿಂದ ಜಿಗಿದ ದಂಪತಿ

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸಿದಾಗ ಆರೋಪಿಯೋರ್ವ ವಿಕೃತಕಾಮಿ, ಸೈಕೋಪಾತ್ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣ ಮಾತ್ರವಲ್ಲದೆ ಆರೋಪಿ ಬೇರೆ ರಾಜ್ಯಗಳಲ್ಲಿ ಇನ್ನೂ ಅನೇಕ ರೇಪ್, ಕೊಲೆಗಳನ್ನು ಮಾಡಿರುವುದರ ಬಗ್ಗೆಯೂ ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗಿ ಪ್ರೀತಿ ನಿರೂಪಿಸೆಂದ – ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿದ

ನ. 24ರಂದು ದಂಪತಿ, ಮಕ್ಕಳು ಮಲಗಿದ್ದಾಗ ಮನೆಗೆ ನುಗ್ಗಿ, ಮೊದಲು ಪತಿಯನ್ನು ಕಲ್ಲಿಂದ ಜಜ್ಜಿ ಕೊಲೆ ಮಾಡಿದೆ. ಬಳಿಕ ಮಹಿಳೆಯನ್ನು ಕೊಲೆಗೈದು ಮೃತದೇಹದ ಮೇಲೆ ಅತ್ಯಾಚಾರವೆಸಗಿದೆ. ಆ ನಂತರ ದಂಪತಿಯ ಮಗಳ ಮೇಲೂ ಅತ್ಯಾಚಾರಗೈದು, ಅವರ 4 ತಿಂಗಳ ಮಗನನ್ನು ಹತ್ಯೆ ಮಾಡಿದೆ. ಉಳಿದ ಇಬ್ಬರು ಮಕ್ಕಳ ಮೇಲೂ ಹಲ್ಲೆ ಮಾಡಿದೆ. ಕೃತ್ಯವೆಸೆಗಿದ ಬಳಿಕ ಸ್ಥಳದಿಂದ ಓಡಿಹೋದೆ ಎಂದು ಆರೋಪಿ ಸತ್ಯಾಂಶ ಬಿಚ್ಚಿಟ್ಟಿದ್ದಾನೆ.

ಜೊತೆಗೆ ಈ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು, ನನ್ನ ನಾದಿನಿಯರಿಗೂ ವಿಡಿಯೋ ತೋರಿಸಿದೆನು. ಅದನ್ನು ನೋಡಿ ಅವರು ಬೆಚ್ಚಿಬಿದ್ದಿದ್ದರು. ನಾನು ಇಲ್ಲಿಯವರೆಗೆ ಎಲ್ಲರನ್ನೂ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದೇ ಕೊಲೆ ಮಾಡಿದ್ದು ಎನ್ನುವ ಭಯಾನಕ ವಿಚಾರವನ್ನು ಪೊಲೀಸರಿಗೆ ಆರೋಪಿ ಹೇಳಿದ್ದಾನೆ. ಆರೋಪಿಯ ಈ ವಿಕೃತ ಮನಸ್ಥಿತಿ ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಆರೋಪಿ ತಾನು ಮಾಡಿದ ಒಂದೊಂದೆ ಕೃತ್ಯಗಳನ್ನು ಪೊಲೀಸರ ಬಳಿ ಬಾಯಿಬಿಡುತ್ತಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *