ದೆಹಲಿಯಲ್ಲೂ ಬಹಿರಂಗವಾಯ್ತು ಮೈತ್ರಿ ಸರ್ಕಾರದ ಮನಸ್ತಾಪ

Public TV
1 Min Read

ನವದೆಹಲಿ: ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮನಸ್ತಾಪ, ವಾಗ್ದಾಳಿಯು ದೆಹಲಿಯಲ್ಲಿಯೂ ಬಹಿರಂಗವಾಗಿದೆ.

ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಅವರು, ಮೈತ್ರಿ ಧರ್ಮ ಪಾಲಿಸುವಂತೆ ರಾಜ್ಯ ಕೈ ಶಾಸಕರಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ರಾಜ್ಯ ನಾಯಕರನ್ನು ನಿಯಂತ್ರಿಸುವಂತೆ ಕೈ ಹೈಕಮಾಂಡ್‍ಗೂ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ನಿಯಂತ್ರಿಸಬೇಕು. ಜೊತೆಗೆ ಮೈತ್ರಿಗೆ ಧಕ್ಕೆ ಆಗುವಂತಹ ಹೇಳಿಕೆ ನೀಡಬಾರದು. ಈ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿ ಕೆಲಸ ಮಾಡಲು ಬಿಡಬೇಕು ಎಂದ ಸಂಸದರು, ಕಾಂಗ್ರೆಸ್ ಶಾಸಕರ ಹೇಳಿಕೆ ನೀಡಿದ ನಂತರವೇ ನಮ್ಮ ಶಾಸಕರು ಪ್ರತಿಕ್ರಿಯೆ ನೀಡಿದ್ದು ಎಂದು ಹೇಳಿ ತಮ್ಮ ಶಾಸಕರನ್ನು ಸಮರ್ಥಿಸಿಕೊಂಡರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಲಿ. ಆದರೆ ಅದರಿಂದ ಮೈತ್ರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಬಣದ ಕಾಂಗ್ರೆಸ್ ಶಾಸಕರು, ನಾಯಕರ ವಿರುದ್ಧ ಸಂಸದರು ಕಿಡಿಕಾರಿದರು.

https://www.youtube.com/watch?v=-cppbuB8d_U

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *