ವಾಣಿಜ್ಯ ಬಳಕೆಯ ಗ್ಯಾಸ್ ಸಮಸ್ಯೆ – ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

1 Min Read

ಬೆಂಗಳೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಮಸ್ಯೆ (LPG Shortage) ಆಗಿರೋ ಹಿನ್ನೆಲೆ ಕೂಡಲೇ ಸಮಸ್ಯೆ ಪರಿಹಾರ ಮಾಡುವಂತೆ ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪೂರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಪತ್ರ ಬರೆದ್ದಾರೆ. ಪತ್ರದಲ್ಲಿ ಸಮಸ್ಯೆ ಪರಿಹಾರ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಬೆಂಗಳೂರಲ್ಲಿ ಸಾಕಷ್ಟು ಹೋಟೆಲ್‌ ರೆಸ್ಟೋರೆಂಟ್‌ಗಳಿವೆ. ಹೋಟೆಲ್‌ಗಳಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆ ಉಂಟಾಗಿದೆ. ಇದರಿಂದ ಸಾಕಷ್ಟು ಹೋಟೆಲ್‌ಗಳಿಗೆ ಬೀಗ ಬಿದ್ದಿದೆ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ. ಬೆಂಗಳೂರಲ್ಲಿ ಲಕ್ಷಾಂತರ ಜನ ಹೋಟೆಲ್ ಊಟ ಅವಲಂಬಿಸಿದ್ದಾರೆ. ಐಒಸಿಎಲ್, ಹೆಚ್ಪಿಸಿಎಲ್, ಬಿಪಿಸಿಎಲ್ ಮೂಲಕ ಗ್ಯಾಸ್ ಸರಬರಾಜು ಮಾಡಲಾಗ್ತಿತ್ತು. 1080 ಎಂಟಿ ಅಷ್ಟು ಗ್ಯಾಸ್ ಪ್ರತೀ ದಿನ ಸರಬರಾಜು ಆಗ್ತಿತ್ತು. ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧದಿಂದ `ಗ್ಯಾಸ್’ ಟ್ರಬಲ್; ಬೆಂಗಳೂರಿನ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತ – ಹೋಟೆಲ್‌ಗಳು ಬಂದ್ ಸಾಧ್ಯತೆ?

ಇದು ಪೂರ್ಣ ಪ್ರಮಾಣದಲ್ಲಿ ನಿಂತು ಹೋಗಿದ್ದರಿಂದ ಸಮಸ್ಯೆ ಉಂಟಾಗಿದೆ. ಮನೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳು, ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಮದುವೆ ಮಂಟಪ, ಹಾಸ್ಟೆಲ್‌ಗಳಿಗೆ ತೊಂದರೆ ಉಂಟಾಗಿದೆ. ಕೂಡಲೇ‌ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಗ್ಯಾಸ್ ಲಭಿಸುವಂತೆ ಮಾಡಬೇಕು ಎಂದು ಸಿಎಂ ಒತ್ತಾಯ ಮಾಡಿದ್ದಾರೆ.

Share This Article