ಶಾಲೆ ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್‌ ಅಭಾವದ ಬಿಸಿ – ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ

1 Min Read

ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಅಭಾವ (LPG Cylinder Shortage) ಶಾಲೆಗಳ ಬಿಸಿಯೂಟ ಯೋಜನೆ ಮೇಲೂ ಪರಿಣಾಮ ಬೀರಿದೆ. ಗ್ಯಾಸ್ ಇಲ್ಲದೇ ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ (School) ಸಿಬ್ಬಂದಿ ಅಡುಗೆ ಮಾಡಲು ಪರದಾಡಿದ್ದಾರೆ.

ಸಿಲಿಂಡರ್‌ ಸರಬರಾಜಾಗದೇ ಇದ್ದಿದ್ದರಿಂದ ಶಾಲೆಯ ಸಿಬ್ಬಂದಿ ಸೌದೆ ಬಳಸಿ ಬಯಲಲ್ಲಿ ಬಿಸಿಯೂಟ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಲೆಯ ಸಿಬ್ಬಂದಿ, ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆಯಲ್ಲೇ ಅಡುಗೆ ಮಾಡುತ್ತಿದ್ದೇವೆ. ಶಾಲೆಯಲ್ಲಿ ಸುಮಾರು 60-70 ಜನ ಮಕ್ಕಳಿದ್ದಾರೆ. ಗ್ಯಾಸ್‌ ಇಲ್ಲದೇ ಸೌದೆಯಲ್ಲಿ ಅಷ್ಟು ಜನ ಮಕ್ಕಳಿಗೆ ಅಡುಗೆ ಸಿದ್ಧಪಡಿಸುವುದು ಕಷ್ಟವಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಉಡುಪಿ ಕಟಪಾಡಿಯಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್

ಜಿಲ್ಲಾಧಿಕಾರಿಗಳ ಸೂಚನೆಯ ಮಧ್ಯೆಯೂ ಗ್ಯಾಸ್ ಏಜೆನ್ಸಿ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಸಹ ಕೇಳಿಬಂದಿದೆ. ಪರೀಕ್ಷೆ ಸಮಯವಾಗಿರುವುದರಿಂದ ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ. ಇದರ ನಡುವೆ ಅಡುಗೆಗೆ ಆದ ತೊಂದರೆಯನ್ನು ಸಹ ಬಗೆಹರಿಸಿಕೊಂಡು ಹೋಗುವುದು ಅವರಿಗೆ ಕಷ್ಟವಾಗುತ್ತಿದೆ. ಕೂಡಲೇ ಗ್ಯಾಸ್ ಸೌಲಭ್ಯ ಕಲ್ಪಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳಿಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊಲ್ಲಿ ಯುದ್ಧದ ನಡುವೆ ಭಾರತಕ್ಕೆ 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ತಂದ ಶಿವಾಲಿಕ್‌ ಹಡಗು

Share This Article