ಮದುವೆಯಾಗಲು ಬಂದ ಪ್ರೇಮಿಗಳಿಗೆ ಗೂಸಾ – ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡಿದ ಯುವತಿ

Public TV
1 Min Read

ಬಾಗಲಕೋಟೆ: ಮದುವೆಯಾಗಲು ಸಬ್ ರಿಜಿಸ್ಟ್ರಾರ್ ಕಚೇರಿಗೆ (Sub-Registrar Office) ಆಗಮಿಸಿದ್ದ ಪ್ರೇಮಿಗಳ ಮೇಲೆ ಯುವತಿ ಕಡೆಯುವರು ದಾಳಿ ನಡೆಸಿ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶುಕ್ರವಾರ ಜಿಲ್ಲೆಯ ಜಮಖಂಡಿ (Jamkhandi ) ನಗರದಲ್ಲಿ ನಡೆದಿದೆ.

ನಗರದ ಉಳ್ಳಾಗಡ್ಡಿ ಏರಿಯಾದ ಪ್ರೇಮಿಗಳಾದ ಗಾಣಿಗ ಸಮುದಾಯದ ಲಕ್ಷ್ಮೀ, ಮರಾಠಾ ಸಮುದಾಯದ ಅಪ್ಪಾಜಿ ಅಂತರ್ಜಾತಿ ವಿವಾಹಕ್ಕೆ ಬೆಳಿಗ್ಗೆ ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಜಮಖಂಡಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ಇದನ್ನೂ ಓದಿ: ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್‌ ಮಾಡಿಕೊಡಬೇಡಿ: ಡಿಸಿಗೆ ಗ್ರಾಮಸ್ಥರ ಮನವಿ

ವಿಷಯ ತಿಳಿದು ಕಚೇರಿಗೆ ಧಾವಿಸಿದ ಯುವತಿಯ ಮನೆಕಡೆಯ ಪೋಷಕರು ಯುವತಿಗೆ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ. ಮೂರ್ಛೆ ಹೋಗಿ ಬಿದ್ದರೂ ಬಿಡದ ಹುಡುಗಿಯ ಮನೆಯವರು ಯುವತಿಗೆ ನೀರು ಕುಡಿಸಿ, ಮನೆಗೆ ಎಳೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕರೆದಿದ್ದಕ್ಕೆ ಚಾಕು ಇರಿದ ಬಾಮೈದ – ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ ಪತಿ!

ಈ ನಡುವೆ ರಿಕ್ಷಾದಲ್ಲಿದ್ದ ಯುವತಿ ಬಾಯಿಯಿಂದ ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡುತ್ತಿದ್ದಳು. ಹಲ್ಲೆಗೆ ಒಳಗಾಗಿರುವ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಿಯಕರ ಸ್ಥಳೀಯ ಜಮಖಂಡಿ ಪೊಲೀಸ್ ಠಾಣೆಯಲ್ಲಿ ತಂಗಿದ್ದಾನೆ.

Share This Article