ಪಾರ್ಕ್, ಥಿಯೇಟರ್ ಆಯ್ತು ಈಗ KSRTC ಬಸ್ಸಿನಲ್ಲೇ ಲವ್ವಿಡವ್ವಿ

Public TV
1 Min Read

ಬೆಂಗಳೂರು: ಪಾರ್ಕ್ ಮತ್ತು ಸಿನಿಮಾ ಥಿಯೇಟರ್ ನಲ್ಲಿ ಜೋಡಿ ಲವ್ವಿಡವ್ವಿ ಮಾಡುವುದು ಸಾಮಾನ್ಯವಾಗಿದೆ. ಆದರೆ ಕೆಎಸ್‍ಆರ್ ಟಿಸಿ ಬಸ್ಸಿನಲ್ಲೂ ಈಗ ಲವ್ವಿಡವ್ವಿ ಮಾಡಲು ಶುರುಮಾಡಿದ್ದಾರೆ.

ಕೋಲಾರ ಜಿಲ್ಲೆಯ ವೆಂಕಟಗಿರಿ ಕೋಟಾದಿಂದ ಬೆಂಗಳೂರಿಗೆ ಬರುವ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಜೋಡಿಯೊಂದು ಸೀಟಲ್ಲೇ ಕುಳಿತು ಅಸಭ್ಯವಾಗಿ ವರ್ತಿಸಿದ್ದಾರೆ. ಆಕೆಯ ಪತಿ ಬಸ್ ಹತ್ತಿಸಲು ವೆಂಕಟಗಿರಿ ಕೋಟಾಗೆ ಬಂದಿದ್ದರು. ಬಸ್ ಹತ್ತಿಸಿ ಹೊರಟ್ಟಿದ್ದಾರೆ.

ಬಸ್ ಬೆಂಗಳೂರು ಕಡೆಗೆ ಹೊರಟು ಕೇವಲ 6 ಕಿ.ಮಿ ಬರುವಷ್ಟರಲ್ಲಿ ಒಬ್ಬ ವ್ಯಕ್ತಿ ಬಸ್ ಏರಿದ್ದಾನೆ. ಆತ ಬೆಂಗಳೂರು ಬರುವ ತನಕ ಬಸ್ಸಿನಲ್ಲಿ ಆಕೆಯ ಪಕ್ಕದಲ್ಲೇ ಕುತಿಳಿದ್ದನು. ಈ ಜೋಡಿ ಬೆಂಗಳೂರು ತಲುಪವವರೆಗೂ ಮೈಮರೆತು ರೊಮ್ಯಾನ್ಸ್ ನಲ್ಲೇ ತೊಡಗಿದ್ದರು ಎಂದು ಕಂಡೆಕ್ಟರ್ ಹೇಳಿದ್ದಾರೆ.

ಇವರಿಗೆ ಏನ್ ಅನ್ನಬೇಕೋ ಗೊತ್ತಾಗುತ್ತಿಲ್ಲ. ಜನರು ಕುಳಿತುಕೊಳ್ಳುವ ಸೀಟಲ್ಲಿ ಕುಳಿತುಕೊಂಡು ಬೇರೆಯವರಿಗೆ ಮುಜುಗರ ಆಗುತ್ತದೆ ಅನ್ನೋ ಕಾಮನ್ ಸೆನ್ಸ್ ಇಲ್ಲದೇ ಈ ರೀತಿ ಬಸ್ಸಿನಲ್ಲೇ ಲವ್ವಿಡವ್ವಿ ಶುರುಮಾಡಿಕೊಂಡಿದ್ದರು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *