ಮೈಸೂರು: ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಮನನೊಂದು ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ಹೆಮ್ಮಿಗೆ ಸೇತುವೆ ಬಳಿ ನಡೆದಿದೆ.
ಮನು (21) ಹಾಗೂ ದೀಪಶ್ರೀ (16) ಆತ್ಮಹತ್ಯೆ ಮಾಡಿಕೊಂಡು ಪ್ರೇಮಿಗಳು. ಮನು ಮೂಲತಃ ನಂಜನಗೂಡಿನ ಕಾಮಹಳ್ಳಿ ಗ್ರಾಮದ ಯುವಕನಾಗಿದ್ದು, ದೀಪಶ್ರೀ ಟಿ. ನರಸೀಪುರದ ಶ್ರೀರಾಂಪುರ ಗ್ರಾಮದವಳು. ದೀಪಶ್ರೀ ಟಿ.ನರಸೀಪುರದ ವಿದ್ಯೋದಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.
ದೀಪಶ್ರೀ ಮತ್ತು ಮನು ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಇಬ್ಬರ ಮನೆಯವರಿಗೂ ತಿಳಿದು ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಮನನೊಂದು ಯುವ ಪ್ರೇಮಿಗಳು ಮೈಸೂರಿನ ತಲಕಾಡಿನ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವಕ ಮನು ವಿಡಿಯೋ ಚಿತ್ರೀಕರಿಸಿದ್ದಾನೆ. ತೀವ್ರ ಶೋಧನೆಯ ಬಳಿಕ ಇಬ್ಬರ ಶವಗಳು ಪತ್ತೆಯಾಗಿದೆ. ಈ ಬಗ್ಗೆ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.