ಸಂಸಾರ ಸಾಗಿಸೋಕೆ ಸರಗಳ್ಳತನ ಮಾಡಿದ್ದ ಲವರ್ಸ್ ಅರೆಸ್ಟ್!

Public TV
1 Min Read

ಚಿಕ್ಕಬಳ್ಳಾಪುರ: ಅವನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿಯನ್ನ ಗರ್ಭಿಣಿ ಮಾಡಿ, ಆಕೆ ಜೊತೆ ಕದ್ದು ಮುಚ್ಚಿ ಸಂಸಾರ ನಡೆಸುತ್ತಿದ್ದ. ಈ ವಿಚಾರ ಎರಡು ಮನೆಯ ಕಡೆಯವರಿಗೂ ಗೊತ್ತಾಗಿ, ಇಬ್ಬರೂ ಮನೆ ಬಿಟ್ಟು ಊರೂರು ಅಲೆಯುವಂತಾಗಿತ್ತು. ಹೀಗಾಗಿ ಇಬ್ಬರಿಗೂ ಇರೋಕೆ ನೆಲೆ ಇರಲಿಲ್ಲ. ಇದರಿಂದ ಮನೆ ಬಾಡಿಗೆಗೆ ಪಡೆದು, ಸಂಸಾರ ಸಾಗಿಸೋಕೆ ಹೋಗಿ ಪ್ರೇಮಿಗಳಿಬ್ಬರು ಸರಗಳ್ಳತನ ಮಾಡಿ ಈಗ ಚಿಕ್ಕಬಳ್ಳಾಪುರ (Chikkaballapur) ಪೊಲೀಸರ ಅತಿಥಿಗಳಾಗಿದ್ದಾರೆ.

ಬಂಧಿತರನ್ನು ಗೌರಿಬಿದನೂರು (Gauribidanur) ತಾಲೂಕಿನ ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Belagavi | ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಹರಿದ ಟ್ಯಾಂಕರ್ – ಮೂವರು ದುರ್ಮರಣ

ಏನಿದು ಘಟನೆ?
ಕಳೆದ ಮೇ 26 ರಂದು ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಬಳಿ ನಿರ್ಮಾಣ ಹಂತದ ತೋಟದ ಮನೆಯಲ್ಲಿ ಒಂಟಿಯಾಗಿದ್ದ ಅಂಜನಮ್ಮಳ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಿ 50 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ನಂದಿಗಿರಿಧಾಮ ಪೊಲೀಸರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜುನನ್ನು ಬಂಧಿಸಿದ್ದಾರೆ.

ಅಂದಹಾಗೆ ಗೋವಿಂದರಾಜುಗೆ ಮದುವೆಯಾಗಿ ಮಕ್ಕಳಿದ್ರೂ ತಮ್ಮದೇ ಗ್ರಾಮದ ತಂದೆ ತಾಯಿ ಇಲ್ಲದೆ ಅಜ್ಜಿಯ ಆಸರೆಯಲ್ಲಿದ್ದ ಅಶ್ವಿನಿಯನ್ನ ಪುಸಲಾಯಿಸಿ ಆಕೆಯನ್ನ ಗರ್ಭಿಣಿ ಮಾಡಿದ್ದ. ಹೀಗಾಗಿ ಮನೆಯಲ್ಲಿ ಊರೆಲ್ಲೆಲ್ಲಾ ವಿಚಾರ ಗೊತ್ತಾಗಿ ಊರು ಬಿಟ್ಟು ಬಂದಿದ್ದರು. ವಾಸ ಮಾಡೋಕೆ ಮನೆ ಇರದೇ ಬಾಡಿಗೆಗೆ ಮನೆ ಮಾಡೋಣ ಎಂದು ಯೋಚಿಸಿದ್ದರು. ಆದರೆ ಹಣವಿರದೇ ಬೈಕ್‌ ಒಂದನ್ನು ಕದ್ದಿದ್ದರು. ಅದೇ ಬೈಕ್‌ಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ ಮಾಡಿದ್ದರು ಎಂದು ತಿಳಿದು ಬಂದಿದೆ.

ಸರ ಕದ್ದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ದಶ್ಯ ಆಧರಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಿಸಿದ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಪ್ರಿಯಕರನೊಂದಿಗೆ ಪರಾರಿಯಾದ ಕೇಡಿ ಲೇಡಿ!

Share This Article