ಕಳಸ | ಪ್ರಿಯತಮೆಗೆ ನಡು ರಸ್ತೆಯಲ್ಲಿ ಚಾಕು ಇರಿದ ಪಾಗಲ್ ಪ್ರೇಮಿ

By
1 Min Read

ಚಿಕ್ಕಮಗಳೂರು: ಪ್ರಿಯತಮೆಗೆ (Lover) ಪಾಗಲ್ ಪ್ರೇಮಿಯೊಬ್ಬ ನಡು ರಸ್ತೆಯಲ್ಲಿ ಚಾಕು ಇರಿದಿರುವ ಘಟನೆ ಕಳಸ (Kalasa) ಪಟ್ಟಣದ ಮಹಾವೀರ ಸರ್ಕಲ್‌ನಲ್ಲಿ ನಡೆದಿದೆ.

ಪಟ್ಟಣದ ಖಾಸಗಿ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿಗೆ ಕೊಪ್ಪ (Koppa) ತಾಲೂಕಿನ ಗುಡ್ಡೆ ತೋಟದ ಗ್ರಾಮದ ಯುವಕನ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.‌ ಇಂದು (ಸೆ.5) ಮಧ್ಯಾಹ್ನ ಕಳಸ ಪಟ್ಟಣದ ಮಹಾವೀರ ವೃತ್ತದ ಬಳಿ ಇಬ್ಬರಿಗೂ ಜಗಳವಾಗಿದೆ. ಆದರೆ, ಜಗಳ ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಜಗಳವಾಗುತ್ತಿದ್ದಂತೆ ಯುವಕ ಯುವತಿಗೆ ಕಲ್ಲು ಹಾಗೂ ಚಾಕುವಿನಿಂದ ಹೊಡೆದಿದ್ದಾನೆ. ಇದನ್ನೂ ಓದಿ: ಲವರ್‌ ಜೊತೆ ಮೂರು ಮಕ್ಕಳ ತಾಯಿ ಜೂಟ್‌ – ಇತ್ತ ಹೆಂಡ್ತಿ ಬೇಕೆಂದು ಗಂಡ ಕಣ್ಣೀರು

ಹಲ್ಲೆಯಿಂದ ಯುವತಿಯ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.

ಕಳಸ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಒಂದಲ್ಲ ಎರಡಲ್ಲ ಮೂವರೊಟ್ಟಿಗೆ ಕಾಂಟ್ಯಾಕ್ಟ್‌ನಲ್ಲಿದ್ದ ಬ್ಯೂಟಿ – ಸ್ಟೇಷನ್‌ನಲ್ಲೇ ತಾಳಿ ಕಿತ್ತು ಗಂಡನ ಕೈಗಿಟ್ಟು ಹೋದ ಪತ್ನಿ

Share This Article