ಕಾರಿನಲ್ಲಿ ಸೆಕ್ಸ್, ಲವ್ವರ್ ಕೊಲೆ- ನಗ್ನ ದೇಹವನ್ನ ಪೋಷಕರ ಬಳಿ ಕೊಂಡೊಯ್ದು ತಪ್ಪೊಪ್ಪಿಕೊಂಡ ಆರೋಪಿ

Public TV
3 Min Read

ನವದೆಹಲಿ: 30 ವರ್ಷದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪ್ರೇಯಸಿಯ ಜೊತೆ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸಿ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರೋ ಘಟನೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?: ದಕ್ಷಿಣ ದೆಹಲಿಯ ಶೇಕ್ ಸಾರೈನ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಪಾರ್ಕ್ ಮಾಡಿದ್ದ ಕಾರಿನಲ್ಲಿ ಆರೋಪಿ ತನ್ನ ಪ್ರೇಯಸಿಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ನಗ್ನ ಮೃತದೇಹವನ್ನು ಮಾಲ್ವಿಯಾ ನಗರದ ಆಕೆಯ ಮನೆಗೆ ತೆಗೆದುಕೊಂಡು ಹೋಗಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾದ ಮಹಿಳೆ ವಿಚ್ಛೇದಿತರಾಗಿದ್ದು, ಘಟನೆಗೆ ಒಂದು ತಿಂಗಳ ಮುಂಚೆ ಆರೋಪಿಯ ಮಗುವನ್ನ ಅಬಾರ್ಷನ್ ಮಾಡಿಸಿದ್ದರು. ಅಂದಿನಿಂದ ಆರೋಪಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಈ ಘಟನೆ ಕಳೆದ ವರ್ಷ ಆಗಸ್ಟ್ 27ರಂದು ನಡೆದಿದ್ದು, ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಕೊಲೆಯಾದ ಮಹಿಳೆ ರೀಟಾ(ಹೆಸರು ಬದಲಾಯಿಸಲಾಗಿದೆ) ತನ್ನ ಗಂಡನಿಂದ ವಿಚ್ಛೇದನ ಪಡೆದಿದ್ದರು. ಅವರಿಗೆ 12 ವರ್ಷದ ಮಗನಿದ್ದ. ಬಾಲಕ ಮಾಲ್ವಿಯಾ ನಗರದ ಅಜ್ಜನ ಮನೆಯಲ್ಲಿ ವಾಸವಿದ್ದ. ಮಹಿಳೆ ಹಾಗೂ ಆರೋಪಿ ಶಾಹ್ಬಾದ್ ಖಾನ್ ಹೆಲ್ತ್‍ಕೇರ್ ಸಂಸ್ಥೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.

ಮದ್ಯಪಾನ ಮಾಡಿದ್ದರು: 8 ತಿಂಗಳ ಹಿಂದೆ ಆರೋಪಿ ಮದುವೆಯಾಗುವುದಾಗಿ ಹೇಳಿ ಮಹಿಳೆಯನ್ನ ಪರಿಚಯ ಮಾಡಿಕೊಂಡಿದ್ದ. ಜುಲೈನಲ್ಲಿ ಮಹಿಳೆ ಗರ್ಭಿಣಿಯಾಗಿದ್ದು, ಅಬಾರ್ಷನ್ ಮಾಡಿಸುವಂತೆ ಒತ್ತಾಯಿಸಿದ್ದ. ಅಂದಿನಿಂದ ಮಹಿಳೆ ಮದುವೆಗೆ ಒತ್ತಡ ಹೇರಿದ್ದರು. ಆದ್ರೆ ಆರೋಪಿ ಅದನ್ನ ತಿರಸ್ಕರಿಸುತ್ತಲೇ ಬಂದಿದ್ದ. ಘಟನೆ ನಡೆದ ದಿನ ಇಬ್ಬರೂ ಹೊರಗೆ ಹೋಗಿದ್ದು ಮದ್ಯಪಾನ ಮಾಡಿದ್ದರು. ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಕಾರಿನಲ್ಲೇ ಸೆಕ್ಸ್ ಮಾಡಿದ ನಂತರ ಆರೋಪಿ ಮಹಿಳೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ರೀಟಾ ಪರಿಚಯಸ್ಥರೊಬ್ಬರು ಹೇಳಿದ್ದಾರೆ.

ಕುಟುಂಬದವರ ಬಳಿ ತಪ್ಪೊಪ್ಪಿಕೊಂಡೆ: ಆರೋಪಿ ಘಜಿಯಾಬಾದ್ ನಿವಾಸಿಯಾಗಿದ್ದು, ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ನಡೆದಾಗ ಇಬ್ಬರೂ ಮದ್ಯಪಾನ ಮಾಡಿದ್ದೆವು ಎಂದು ಹೇಳಿದ್ದಾನೆ. ಕಾರಿನ ಫ್ರಂಟ್ ಸೀಟ್‍ನಲ್ಲಿ ಸೆಕ್ಸ್ ಮಾಡುವ ವೇಳೆ ಕತ್ತು ಹಿಸುಕಿದೆ. ಕೆಲವು ಗಂಟೆಗಳ ಬಳಿಕ ರೀಟಾಳನ್ನು ಕೊಲೆ ಮಾಡಿರುವುದು ಅರಿವಾಗಿ ಆಕೆಯ ಕುಟಂಬಸ್ಥರ ಬಳಿ ಹೋಗಿ ನಡೆದಿದ್ದನ್ನು ಹೇಳಿದೆ ಎಂದು ತನ್ನ ಹೇಳಿಕೆಯಲ್ಲಿ ಖಾನ್ ತಿಳಿಸಿದ್ದಾನೆ.

ರೀಟಾ ತಂದೆ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ಐಪಿಸಿ ಸಸೆಕ್ಷನ್ 302ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧ್ಯರಾತ್ರಿ 1 ಗಂಟೆ ವೇಳೆಯಕಲ್ಲಿ ಶೇಕ್ ಸಾರೈ ಬಳಿ ಕಾರು ನಿಲ್ಲಿಸಿದ್ದರು. ಇಬ್ಬರೂ ಮದ್ಯಪಾನ ಮಾಡಿದ್ದರು. ಇಬ್ಬರ ಮಧ್ಯೆ ಜಗಳವಾಗಿ ಖಾನ್ ನನ್ನ ಮಗಳನ್ನ ಕೊಂದಿದ್ದಾನೆ. ನಂತರ ಶವವನ್ನ ಮನೆಗೆ ತಂದು ನಡೆದಿದ್ದನ್ನು ಹೇಳಿ ತಪ್ಪೊಪ್ಪಿಕೊಂಡ ಎಂದು ರೀಟಾ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ಕೂಡಲೇ ರೀಟಾ ಅವರನ್ನು ಏಮ್ಸ್ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅದಾಗಲೇ ಮಹಿಳೆ ಸಾವನ್ನಪ್ಪಿದ್ದಾರೆಂದು ವೈದ್ಯರು ಹೇಳಿದ್ದಾರೆ. ಆರೋಪಿ ನಡೆದ ಘಟನೆಯನ್ನು ವಿವರಿಸಿದ. ಆತ ಎಷ್ಟು ಬಲವಾಗಿ ಆಕೆಯ ಕತ್ತು ಹಿಸುಕಿದ್ದನೆಂದರೆ ಮಹಿಳೆಯ ಕತ್ತಿನ ಭಾಗದ ಮೂಳೆಗಳೇ ಮುರಿದಿದ್ದವು. ಆಮ್ಲಜನಕದ ಕೊರತೆಯಿಂದಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ರೀಟಾ 2002ರಲ್ಲಿ ಪ್ರೇಮ ವಿವಾಹವಾಗಿದ್ದರು. ಆಕೆಯ ಗಂಡ ಏರ್‍ಲೈನ್ಸ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಬಹುತೇಕ ಸಮಯ ನಗರದಿಂದ ಹೊರಗಡೆಯೇ ಇರುತ್ತಿದ್ದರು. ನಂತರ ಪತಿಗೆ ಅಕ್ರಮ ಸಂಬಂಧ ಇರುವುದು ರೀಟಾಗೆ ಗೊತ್ತಾಗಿತ್ತು.

ಖಾನ್ ಜೊತೆ ಸಂಬಂಧ ಇದ್ದಿದ್ದು ಕುಟುಂಬದಲ್ಲಿ ಯಾರಿಗೂ ತಿಳಿದಿರಲಿಲ್ಲ. ಖಾನ್ ನನ್ನ ಮಗಳನ್ನ ಕೇವಲ ಹಣಕ್ಕಾಗಿ ಬಳಸಿಕೊಂಡಿದ್ದ ಎಂಬುದು ಇತ್ತೀಚೆಗೆ ಗೊತ್ತಾಯಿತು. ಆತನಿಗೆ ರೀಟಾ 60 ಸಾವಿರ ರೂ. ಕೊಡಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಕೊಡಲು ಸಾಧ್ಯವಾಗಿರಲಿಲ್ಲ ಎಂದು ರೀಟಾ ತಂದೆ ಹೇಳಿದ್ದಾರೆ.

ಅರೋಪಿ ಖಾನ್ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *