ಕುಡಿದ ಮತ್ತಲ್ಲಿ ಇನ್ನೂ ಎಣ್ಣೆ ಕೊಡಿಸು ಅಂತ ಪೀಡಿಸಿದ ಪ್ರಿಯತಮೆ ಕೊಂದ ಪ್ರಿಯಕರ

Public TV
1 Min Read

ಚಿಕ್ಕಬಳ್ಳಾಪುರ: ಮದ್ಯಕ್ಕಾಗಿ ಪೀಡಿಸಿದ ಪ್ರಿಯತಮೆಯನ್ನ ಪ್ರಿಯಕರ ಮಚ್ಚಿನಿಂದ ಮನಸ್ಸೋಇಚ್ಛೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ಪಟ್ಟಣದ ವಾರ್ಡ್ ನಂಬರ್ 8ರಲ್ಲಿ ನಡೆದಿದೆ.

ರಮಿಜಾಬಿ (25) ಮೃತ ಪ್ರಿಯತಮೆ. ಬಾಬಾಜಾನ್ (40) ಕೊಲೆ ಮಾಡಿದ ಪ್ರಿಯಕರ. ಮೂಲತಃ ಶ್ರೀನಿವಾಸಪುರದ ರಮಿಜಾಬಿಗೆ ಬೇರೊಬ್ಬರ ಜೊತೆ ವಿವಾಹವಾಗಿ ಮಕ್ಕಳಿದ್ದರು. ಇತ್ತ ಬಾಬಾಜಾನ್‌ಗೂ ಮದುವೆಯಾಗಿ ಮಕ್ಕಳಿದ್ದರು. ಇದನ್ನೂ ಓದಿ: ಬ್ರಹ್ಮಾವರ | ನಂಬರ್ ಬ್ಲಾಕ್ ಮಾಡಿದ್ದಕ್ಕೆ ಯುವತಿಯ ಕತ್ತು, ಎದೆಗೆ ಚಾಕು ಇರಿದ ಪಾಗಲ್ ಪ್ರೇಮಿ

ಆದರೂ ಇಬ್ಬರೂ, ಗಂಡ, ಹೆಂಡತಿ ಮತ್ತು ಮಕ್ಕಳನ್ನ ಬಿಟ್ಟು ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು. ಇಬ್ಬರು ಸಹ ಕುಡಿತದ ಚಟಕ್ಕೆ ಬಿದ್ದಿದ್ದರು. ಪದೇ ಪದೇ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹಾಸನ | ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಹತ್ಯೆಯಾದ ಅತ್ತೆ

ಶುಕ್ರವಾರ ಸಂಜೆ ಸಹ ಕುಡಿದು ಗಲಾಟೆ ಮಾಡಿಕೊಂಡಿದ್ದು, ರಮಿಜಾಬಿ ತನಗೆ ಮತ್ತಷ್ಟು ಎಣ್ಣೆ ಬೇಕೆಂದು ಪೀಡಿಸಿದ್ದಳಂತೆ. ಇದರಿಂದ ಸಿಟ್ಟಿಗೆದ್ದ ಬಾಬಾಜಾನ್ ಮಚ್ಚಿನಿಂದ ಮನಸ್ಸೋಇಚ್ಛೆ ಕೊಚ್ಚಿ ಕೊಂದಿದ್ದಾನೆ.

ಘಟನಾ ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಹಾಗೂ ಎಸ್ಪಿ ಕುಶಲ್ ಚೌಕ್ಸಿ ಭೇಟಿ ನೀಡಿ, ಬಾಬಾಜಾನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೃತದೇಹವನ್ನ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿ ತನಿಖೆ ಕೈಗೊಂಡಿದ್ದಾರೆ.

Share This Article