ವಿವಾಹಿತನ ಜೊತೆ ಪ್ರೀತಿ, ಮದುವೆಗೆ ನಿರಾಕರಣೆ – ವಿವಾಹಿತೆ ಲೈವ್ ಸೂಸೈಡ್

1 Min Read

ಬಳ್ಳಾರಿ: 23 ವರ್ಷದ ಮಹಿಳೆಯೊಬ್ಬಳು ವಿಡಿಯೋ ಮಾಡುತ್ತಲೇ ಆತ್ಮಹತ್ಯೆ (Live Suicide) ಮಾಡಿಕೊಂಡ ಘಟನೆ ಬಳ್ಳಾರಿಯ (Ballari) ಹುಸೇನ್‌ ನಗರದಲ್ಲಿ ನಡೆದಿದೆ.

ಮುನ್ನಿ (23) ಆತ್ಮಹತ್ಯೆಗೆ ಶರಣಾದ ಮಹಿಳೆ. ಮದುವೆಯಾಗಿ ಎರಡು ಮಕ್ಕಳನ್ನ ಹೊಂದಿದ್ದ ಮುನ್ನಿ ಆರು ತಿಂಗಳಿಂದ ಪತಿಯಿಂದ ದೂರ ಇದ್ದಳು. ಈ ಮಧ್ಯೆ ವಿವಾಹಿತ ಮೊಹಮ್ಮದ್‌ ಶೇಕ್ ಪ್ರೀತಿಗೆ(Love) ಬಿದ್ದಿದ್ದಳು.  ಇದನ್ನೂ ಓದಿ: ಚಿರತೆ ದಾಳಿಗೆ ಹಸು ಸಾವು – ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ


ಮುನ್ನಿಗೆ ಶೇಖ್ ಸಂಬಂಧದಲ್ಲಿ ಅಣ್ಣ ಆಗಿದ್ದರೂ ಇಬ್ಬರು ಪ್ರೀತಿ ಮಾಡುತ್ತಿದ್ದರು. ಪ್ರೀತಿಯ ನಂತರ ನನ್ನನ್ನು ಮದುವೆಯಾಗು ಎಂದು ಮುನ್ನಿ ಒತ್ತಾಯ ಮಾಡುತ್ತಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುನ್ನಿ ಹಾಗೂ ಶೇಕ್‌ ಮಧ್ಯೆ ಗಲಟೆ ನಡೆದಿದೆ. ಈ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮುನ್ನಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಲೈವ್ ಸೂಸೈಡ್ ವಿಡಿಯೋದಲ್ಲಿ ನನಗೆ ತೊಂದರೆ ನೀಡಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾಳೆ. ಬಳ್ಳಾರಿಯ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article