ಲವ್-ಸೆಕ್ಸ್ ದೋಖಾ; ಯುವತಿ ಜೊತೆ ಸಲುಗೆ ಬೆಳೆಸಿ 37 ಲಕ್ಷ ವಂಚನೆ – ಆರೋಪಿ ಬಂಧನ

1 Min Read

ಬೆಂಗಳೂರು: ಪ್ರೀತಿ-ಪ್ರೇಮ-ಮದುವೆ ಹೆಸರಿನಲ್ಲಿ ಯುವತಿಯಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶುಭಾಂಶು ಶುಕ್ಲಾ ಬಂಧಿತ ಆರೋಪಿ. ಮೂಲತಃ ಹರಿಯಾಣ ರಾಜ್ಯದ ಮೂಲದ ಯುವಕ. ಈತ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ.ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ಐಫೈ ಜೀವನಕ್ಕೆ ಮನಸೋತ ಯುವತಿಯರು ವಂಚನೆ ಬಳಿಕ ಸತ್ಯ ಗೊತ್ತಾದ ಮೇಲೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಆರೋಪಿಗೆ ಸೂಕ್ತ ಶಿಕ್ಷೆಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ಹೊಸ್ತಿಲಲ್ಲೇ ಭರ್ಜರಿ ಬೇಟೆ; ಬೆಂಗಳೂರಲ್ಲಿ 55.88 ಕೋಟಿ ಮೌಲ್ಯದ ಡ್ರಗ್ಸ್ ಸೀಜ್

ಬಾಲಕಿಯೊಬ್ಬಳ ಜೊತೆ ಈತ ಸ್ನೇಹ ಬೆಳೆಸಿಕೊಂಡಿದ್ದ. ಆಕೆ ಮೂಲಕ ಕುಟುಂಬಸ್ಥರ ಪರಿಚಯವಾಗಿ ಮನೆಮಗನಂತೆ ನಾಟಕವಾಡಿದ್ದ. ನಂತರ ಬಾಲಕಿಯ ಸಹೋದರಿಯನ್ನು ಪ್ರೀತಿ ಬಲೆಯಲ್ಲಿ ಬೀಳಿಸಿ ಖಾಸಗಿ ಫ್ಲಾಟ್‌ನಲ್ಲಿರಿಸಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ. ಯುವತಿ ಬಳಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಕೂಡ ಮಾಡಿದ್ದಾನೆ.

ಈ ನಡುವೆ ಶುಭಾಂಶುಗೆ ಬೇರೆ ಮದುವೆಯಾಗಿದ್ದ ಬಗ್ಗೆ ಯುವತಿಗೆ ತಿಳಿಯತ್ತೆ. ಈ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ, ಅವಳಿಗೆ ಡಿವೋರ್ಸ್ ಕೊಡುವ ನೆಪ ಹೇಳಿ, ಯುವತಿ ಬಳಿ ಹಣ ಪಡೆದು ಪ್ರತಿನಿತ್ಯ ಚಿತ್ರ ಹಿಂಸೆ ನೀಡುತ್ತಿದ್ದ. ಶುಭಾಂಶು ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ – ಬಸ್ ಚಾಲಕ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ

Share This Article