ಇನ್‌ಸ್ಟಾದಲ್ಲಿ ಲವ್, ಮದ್ವೆ ಹೆಸರಲ್ಲಿ ಸೆಕ್ಸ್ – ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡಿ 150 ಗ್ರಾಂ ಚಿನ್ನ, 19 ಲಕ್ಷ ಪಡೆದು ವಂಚನೆ

1 Min Read

ಬೆಳಗಾವಿ: ಹುಬ್ಬಳ್ಳಿ ಕೇಸ್ ಹಸಿಯಾಗಿರುವಾಗಲೇ ಬೆಳಗಾವಿಯಲ್ಲಿ ಲವ್-ಸೆಕ್ಸ್-ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಹೆಸರಿನಲ್ಲಿ ಮೋಸ, ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ.

ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೂಲಕ ಸ್ನೇಹ ಮಾಡಿಕೊಂಡು ನಂತರ ಸ್ನೇಹ, ಪ್ರೀತಿಗೆ ತಿರುಗಿ ಮೋಸದ ಜಾಲದಲ್ಲಿ ಯುವತಿ ಸಿಲುಕಿದ್ದಾಳೆ. ಬೆಳಗಾವಿ ಮಾಧವ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮ್‌ಸಿಂಗ್ ಬಡಗೂಜರ್ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:ಹು ಬ್ಬಳ್ಳಿ ಲವ್ ಜಿಹಾದ್ – ಅತ್ಯಾಚಾರ ಬಳಿಕ ಬೆದರಿಕೆಯೊಡ್ಡಿ 70 ಸಾವಿರಕ್ಕೂ ಅಧಿಕ ಹಣ ಪೀಕಿದ್ದ ಸಮೀರ್

ಮದುವೆ ಆಗೋದಾಗಿ ದೈಹಿಕ ಸಂಪರ್ಕ ಬೆಳೆಸಿ, ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಿದ್ದಲ್ಲದೇ ಯುವತಿಗೆ ತಿಳಿಯದೇ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಆರೋಪಿಸಲಾಗಿದೆ. ಹಣ ಕೊಡ್ಲಿಲ್ಲ ಅಂದ್ರೆ ವೈರಲ್ ಮಾಡೋದಾಗಿ ಬೆದರಿಸಿ, 150 ಗ್ರಾಂ ಚಿನ್ನಾಭರಣ, 19 ಲಕ್ಷ ರೂ. ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ. ಇದರಿಂದ ತಾಯಿಯ ಚಿನ್ನ, ತಂದೆಯ ಎಫ್‌ಡಿ ಹಣವನ್ನು ಸಂತ್ರಸ್ತೆ ಕಳೆದುಕೊಂಡಿದ್ದಾರೆ. ಅಲ್ಲದೆ, 3 ಕೋಟಿ ರೂ. ಕೊಟ್ಟರೆ ಮದುವೆ ಮಾಡಿಕೊಳ್ಳೋದಾಗಿ ಯವಕನ ತಾಯಿ ದರ್ಪ ತೋರಿದ್ದಾರೆ ಎನ್ನಲಾಗಿದೆ.

ಪ್ರೀತಿಯ ಮುಖವಾಡದ ಹಿಂದೆ ಕ್ರೂರ ಮನಸ್ಥಿತಿಗೆ ಕಠಿಣ ಶಿಕ್ಷೆಯಾಗಲಿ ಎಂದು ಅನ್ಯಾಯಕ್ಕೊಳಗಾದ ಯುವತಿ ಆಗ್ರಹಿಸಿದ್ದಾರೆ. ಮತ್ತೊಂದೆಡೆ ನ್ಯಾಯ ಕೇಳಲು ಪೊಲೀಸರು ಮೊರೆ ಹೋದ್ರೆ ಪೊಲೀಸರ ಮೇಲೂ ಸೆಟಲ್ಮೆಂಟ್ ಮಾಡಿಕೊಳ್ಳುವಂತೆ ಒತ್ತಡ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ದೂರು ನೀಡಿದರೂ ಸಹ ದೂರನ್ನು ಸ್ವೀಕರಿಸದ ಆರೋಪ ಶಹಾಪುರದ ಪೊಲೀಸರ ವಿರುದ್ಧವೂ ಕೇಳಿ ಬಂದಿದೆ.

ಈ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಕಚೇರಿಗೆ ಯುವತಿ ದೂರು ಕೊಟ್ಟ ಬಳಿಕ ಕೊನೆಗೆ ಆರೋಪಿ ವಿರುದ್ಧ ಕೇಸ್ ದಾಖಲಿಸಿಕೊಂಡ ಪೊಲೀಸರು, ಆತನನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ

Share This Article