ವಾಮಾಚಾರ ಮಾಡಿ ಮಗಳಿಗೆ ಮರುಮದ್ವೆ – ಹೆತ್ತವರಿಂದ ತಪ್ಪಿಸಿಕೊಂಡು ಲವ್ವರ್ ಜೊತೆ ಒಂದಾದ ಯುವತಿ

Public TV
1 Min Read

ಚಿತ್ರದುರ್ಗ: ಪ್ರೀತಿಸಿ ಮದುವೆಯಾಗಿರುವ ತಮ್ಮ ಮಗಳಿಗೆ ವಾಮಾಚಾರ ಮಾಡಿಸಿ ಮತ್ತೆ ಮರು ಮದುವೆ ಮಾಡಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಬಳ್ಳಾರಿ ಜಿಲ್ಲೆಯ ಹಿರೇ ಕುಂಬಳಗುಂಟೆ ಗ್ರಾಮದ ಬಸವರಾಜಪ್ಪ ಮತ್ತು ಮಂಗಳಮ್ಮ ದಂಪತಿಯ ಪುತ್ರಿ ಮಾನಸ ಹಾಗೂ ಕೋಲ್ ಬಜಾರ್‍ನ ನಿವಾಸಿ ವಿಜಯ್ ಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಈ ಜೋಡಿ ಎರಡು ತಿಂಗಳ ಹಿಂದೆಯಷ್ಟೇ ಚಿತ್ರದುರ್ಗದಲ್ಲಿ ವಿವಾಹವಾಗಿದ್ದರು.

ವಿಜಯ್ ಕುಮಾರ್ ಪತ್ನಿಯನ್ನು ತವರು ಮನೆಯಲ್ಲಿರುವಂತೆ ಹೇಳಿ ಖಾಸಗಿ ಉದ್ಯೋಗ ಮಾಡಿಕೊಂಡಿದ್ದನು. ಆದರೆ ಇವರ ಮದುವೆಯ ವಿಚಾರ ತಿಳಿದ ಮಾನಸ ಕುಟುಂಬಸ್ಥರು, ತರಾತುರಿಯಲ್ಲಿ ಆಕೆಯ ಸೋದರ ಮಾವ ರಾಘವೇಂದ್ರನೊಂದಿಗೆ ಮತ್ತೆ ಮರುಮದುವೆ ನೆರವೇರಿಸಲು ಸಿದ್ಧತೆ ನಡೆಸಿದ್ದರು.

`ಈ ವಿಚಾರ ತಿಳಿದು ನಾನು ನನ್ನ ಪತಿಯೊಂದಿಗೆ ಪರಾರಿಯಾಗಲು ಸಿದ್ಧತೆ ನಡೆಸಿದ್ದೆ. ಆದ್ರೆ ನನ್ನ ಪ್ರಯತ್ನ ವ್ಯರ್ಥವಾಗಿ ಪೋಷಕರು ಗ್ರಾಮದ ಮನೋಜ್ ಯುವಕನೊಂದಿಗೆ ಸೇರಿ ನನಗೆ ವಾಮಾಚಾರ ಮಾಡಿಸಿ, ಹಿಂಸಿಸಿ, ಬೆಂಕಿಯಿಂದ ಬರೆ ಹಾಕಿ ಇಷ್ಟವಿಲ್ಲದ ಮದುವೆಗೆ ಒಪ್ಪುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನನ್ನು ಎಚ್ಚರ ತಪ್ಪಿಸಿ ರಾತ್ರೋರಾತ್ರಿ ತಮ್ಮ ಸಂಬಂಧಿ ರಾಘವೇಂದ್ರನಿಗೆ ಮತ್ತೆ ಮರು ಮದುವೆ ಮಾಡಿಸಿ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು’ ಎಂದು ನೊಂದ ಮಾನಸ ಆರೋಪಿಸಿದ್ದಾರೆ.

ಪೋಷಕರ ಸಂಚು ಅರಿತು ಅಲ್ಲಿಂದ ರಾತ್ರೋರಾತ್ರಿ ತಪ್ಪಿಸಿಕೊಂಡು ಬಂದಿರುವ ಮಾನಸ ನನ್ನ ಜೊತೆನೊಂದಿಗೆ ನೆಲೆಸಿದ್ದಾಳೆ. ಆದರೆ ನಮ್ಮಿಬ್ಬರಿಗೆ ಪ್ರಾಣ ಭಯದ ಭೀತಿ ಕಾಡುತ್ತಿದ್ದು, ಮಾನಸಾಳ ಕುಟುಂಬಸ್ಥರಿಂದ ಹಲ್ಲೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ನಮ್ಮನ್ನು ಬೇರ್ಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಈ ಬಗ್ಗೆ ನ್ಯಾಯಕ್ಕಾಗಿ ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಪೊಲೀಸರ ಮೊರೆ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತಿ ವಿಜಯ್ ಕುಮಾರ್ ಹೇಳಿದ್ದಾರೆ.

ಕಾನೂನಾತ್ಮಕವಾಗಿ ಇವರು ವಿವಾಹವಾಗಿ ಮದುವೆ ನೋಂದಣಿಯಾಗಿದ್ದರೂ ಕೂಡ ನಮಗೆ ರಕ್ಷಣೆ ಇಲ್ಲವಾಗಿದೆ. ಹೀಗಾಗಿ ನಮಗೆ ರಕ್ಷಣೆ ಒದಗಿಸಿ. ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿ ಅಂತ ಪ್ರೇಮಿಗಳು ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *