ಕೊರೊನಾ ಭೀತಿ ನಡ್ವೆ ಎಮರ್ಜೆನ್ಸಿ ಲವ್ ಮ್ಯಾರೇಜ್ – ಕೇವಲ 4 ನಿಮಿಷದಲ್ಲಿ ನಡೆದ ಮದ್ವೆ

Public TV
1 Min Read

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ಶ್ರೀ ಮಲಿಯಮ್ಮದೇವಿ ಸನ್ನಿಧಾನದಲ್ಲಿ ಇಂದು ಎಮರ್ಜೆನ್ಸಿ ಪ್ರೇಮವಿವಾಹ ಜರುಗಿದೆ. ಕೇವಲ 4 ನಿಮಿಷಗಳಲ್ಲಿ ಮದುವೆ ಕಾರ್ಯ ಮಾಡಿಸಿ ಸಿದ್ದಾಪುರ ಗ್ರಾಮಸ್ಥರು ಎಲ್ಲರ ಗಮನ ಸೆಳೆದಿದ್ದಾರೆ.

ಸಿದ್ಧಾಪುರ ಗ್ರಾಮದ ರೊಹಿಣಿ(20) ಮತ್ತು ಮಧು(25) ಕೊರೊನಾ ಎಮರ್ಜೆನ್ಸಿನಲ್ಲಿ ಮದುವೆಯಾದ ಜೋಡಿ. ಇವರಿಬ್ಬರೂ ಸಿದ್ದಾಪುರ ಗ್ರಾಮದವರೇ ಆಗಿದ್ದು, ಇಬ್ಬರೂ ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊರೊನಾ ಎಮರ್ಜೆನ್ಸಿ ಹಿನ್ನೆಲೆ ಲಾಕ್‍ಡೌನ್ ನಿಯಮ ಪಾಲಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೂ ಪ್ರೇಮಿಗಳಿಬ್ಬರ ಕುಟುಂಬದವರು ಅತ್ಯಂತ ಸರಳ ರೀತಿಯಲ್ಲಿ ಪ್ರೇಮಿಗಳ ಎಮರ್ಜೆನ್ಸಿ ಮದುವೆ ಮಾಡಿ ಮುಗಿಸಿದ್ದಾರೆ.

ಶ್ರೀಮಲಿಯಮ್ಮ ದೇವಿಯ ಸನ್ನಿಧಾನದಲ್ಲಿ ವರ ವದುವಿಗೆ ಮಾಂಗಲ್ಯ ಕಟ್ಟುವ ಮೂಲಕ ಪ್ರೇಮಿಗಳಿಬ್ಬರೂ ಸರಳ ವಿವಾಹವಾಗಿದ್ದಾರೆ. ಕೆಲವೇ 4 ನಿಮಿಷಗಳಲ್ಲಿ ಜರುಗಿಹೋದ ಸರಳ ಪ್ರೇಮವಿವಾಹದ ಸಂಭ್ರಮದಲ್ಲಿ ಪ್ರೇಮಿಗಳ ಕುಟುಂಬಸ್ಥರು ಹಾಗೂ ಕೆಲ ಗ್ರಾಮಸ್ಥರು ಭಾಗಿಯಾಗಿದ್ದರು. ಲಾಕ್‍ಡೌನ್ ನಿಯಮದಂತೆ ಹೆಚ್ಚು ಮಂದಿಯನ್ನು ಮದುವೆಗೆ ಕರೆಯದೇ ಸರಳವಾಗಿ ವಿವಾಹವಾಗಿ ಪ್ರೇಮಿಗಳು ಹೊಸ ಜೀವನ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *