2 ವರ್ಷ ಪ್ರೀತಿಸಿ, ಅನೇಕ ತಿರುವು ಬಂದ್ರೂ ಒಂದಾದ್ರು – ಮದ್ವೆಯಾದ 12 ಗಂಟೆಯಲ್ಲಿ ಬ್ರೇಕಪ್

Public TV
1 Min Read

– ಮನೆಯವರನ್ನು ಕಷ್ಟ ಪಟ್ಟು ಒಪ್ಪಿಸಿದ್ರು
– ಬ್ರೇಕಪ್ ಮಾಡಿಕೊಳ್ಳಲು ಹಠ ಹಿಡಿದ ಯುವತಿ

ಲಕ್ನೋ: ಪ್ರೇಮಿಗಳ ಎರಡು ವರ್ಷಗಳ ಪ್ರೀತಿ ಅನೇಕ ತಿರುವು ತೆಗೆದುಕೊಂಡು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ 12 ಗಂಟೆಯಲ್ಲಿಯೇ ಬೇಕಪ್ ಆಗಿರುವ ಘಟನೆ ಉತ್ತರ ಪ್ರದೇಶದ ಹಮೀರ್ ಪುರ ಜಿಲ್ಲೆಯ ಮೌದಾಹ ಪ್ರದೇಶದಲ್ಲಿ ನಡೆದಿದೆ.

ಸಂದೀಪ್ ಮತ್ತು ಯುವತಿ ಪರಸ್ಪರ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಈ ವಿಚಾರ ಹುಡುಗಿಯ ಕುಟುಂಬದವರಿಗೆ ತಿಳಿದಿದೆ. ಆಗ ಕುಟುಂಬದವರು ಸಂದೀಪ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಲವಂತವಾಗಿ ಹುಡುಗಿಯಿಂದ ಮೌದಾಹ ಪೊಲೀಸರಿಗೆ ದೂರು ಕೊಡಿಸಿದ್ದರು. ಪೊಲೀಸರು ಸಂದೀಪ್‍ನನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಹುಡುಗಿ ತಾನು ನೀಡಿದ್ದ ದೂರನ್ನು ವಾಪಸ್ ತೆಗೆದುಕೊಂಡಿದ್ದಳು.

ದೂರು ವಾಪಸ್ ತೆಗೆದುಕೊಂಡಿದ್ದಕ್ಕೆ ಕೋಪಗೊಂಡ ಕುಟುಂಬದವರು ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದರು. ಹುಡುಗಿ ಸಂದೀಪ್ ಬಳಿ ಹೋಗಿದ್ದಾಳೆ. ಆಗ ಸಂದೀಪ್ ತನ್ನ ಕುಟುಂಬದವರನ್ನು ಮದುವೆಗೆ ಒಪ್ಪಿಸಿದ್ದಾನೆ. ಕೊನೆಗೆ ಸಂದೀಪ್ ಕುಟುಂಬದ ಸಮ್ಮುಖದಲ್ಲಿ ದೇವಾಲಯದಲ್ಲಿ ಸೋಮವಾರ ಪ್ರೇಮಿಗಳು ಮದುವೆಯಾದರು. ಆದರೆ ಮಂಗಳವಾರ ಹುಡುಗಿಗೆ ಏನಾಯ್ತೋ ಏನೋ ಮತ್ತೆ ಮನಸ್ಸು ಬದಲಾಯಿಸಿಕೊಂಡು ಈ ಮದುವೆಯನ್ನು ಬ್ರೇಕಪ್ ಮಾಡಿಕೊಳ್ಳೋಣ ಎಂದು ಹಠ ಮಾಡಿದ್ದಾಳೆ.

ಆಗ ಸಂದೀಪ್ ಹುಡುಗಿಯ ಚಂಚಲ ಮನಸ್ಸಿನಿಂದ ಬೇಸರಗೊಂಡು ಆಕೆಯ ಇಚ್ಛೆಗೆ ಒಪ್ಪಿಕೊಂಡಿದ್ದಾನೆ. ಕೊನೆಗೆ ಇಬ್ಬರು ಪೊಲೀಸ್ ಠಾಣೆಗೆ ಹೋಗಿ ತಮ್ಮ ಮದುವೆಯನ್ನು ಮುರಿದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಕೊನೆಗೆ ಪೊಲೀಸರು ಹುಡುಗಿಯ ಕುಟುಂಬದವರಿಗೆ ಫೋನ್ ಮಾಡಿ, ಮಗಳನ್ನು ಮನೆಗೆ ಕರೆದುಕೊಂಡು ಹೋಗುವಂತೆ ಮಾಹಿತಿ ನೀಡಿದ್ದಾರೆ.

“ನಾನು ಅವಳ ಚಂಚಲ ಮನಸ್ಸಿನಿಂದ ಬೇಸರಗೊಂಡಿದ್ದೇನೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಅವಳಿಗೆ ಏನು ಬೇಕು ಎಂಬುದು ತಿಳಿದಿಲ್ಲ. ಸದ್ಯಕ್ಕೆ ಈ ವಿಚಾರವೂ ಮುಗಿದಿದೆ ಎಂದು ನನಗೆ ಸಮಾಧಾನವಾಗಿದೆ” ಎಂದು ಸಂದೀಪ್ ಮಾಧ್ಯಮಗಳ ಮುಂದೆ ತಿಳಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *