ಚಿಕ್ಕಬಳ್ಳಾಪುರ | ಪೋಷಕರ ವಿರೋಧದ ನಡ್ವೆ ಹಿಂದೂ ಯುವಕ – ಮುಸ್ಲಿಂ ಯುವತಿ ಪ್ರೇಮ ವಿವಾಹ

Public TV
1 Min Read

– ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ನವದಂಪತಿ

ಚಿಕ್ಕಬಳ್ಳಾಪುರ: ಒಂದೇ ಗ್ರಾಮದ ಬೇರೆ ಬೇರೆ ಧರ್ಮದ ಯುವಕ – ಯುವತಿ ಪರಸ್ಪರ ಪ್ರೀತಿಸಿ ಪ್ರೇಮವಿವಾಹವಾಗಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದ ನಾಗಾರ್ಜುನ ಹಾಗೂ ಫಸಿಯಾ ಎಂಬುವವರು 2 ವರ್ಷದಿಂದ ಪರಸ್ಪರ ಪ್ರೀತಿಸಿ ಈಗ ಮದುವೆಯಾಗಿದ್ದಾರೆ (Love Marriage). ಇದನ್ನೂ ಓದಿ: ಕದನ ವಿರಾಮ ಮಾತುಕತೆ ನಡ್ವೆ ರಷ್ಯಾ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ 5 ವರ್ಷದ ಮಗು ಸೇರಿ 7 ಮಂದಿ ಸಾವು

ಮದುವೆಗೆ ಯುವತಿ ಪೋಷಕರ ವಿರೋಧದಿಂದ ಮನೆಯಂದ ಹೋಗಿ ಮದುವೆಯಾಗಿದ್ದಾರೆ. ಮನೆಯವರು ಅಡ್ಡಿ ವಿರೋಧದ ಹಿನ್ನಲೆಯಲ್ಲಿ ನವ ವಧುವರರು ಸೀದಾ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ (Chikkaballapura Rural Police Station) ಆಗಮಿಸಿ ರಕ್ಷಣೆ ಕೊಡುವಂತೆ ಕೋರಿಕೊಂಡಿದ್ದಾರೆ. ಎರಡು ಕೆಡೆಯವರ ತಂದೆ-ತಾಯಿ ಬಂಧು ಬಳಗ ಕರೆಸಿ ಯುವತಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ ತಾನು ಇಷ್ಟಪಟ್ಟೇ ಮದುವೆಯಾಗಿದ್ದು ಆತನ ಜೊತೆಯಲ್ಲೇ ಜೀವನ ಮಾಡುವುದಾಗಿ ತಿಳಿಸಿದ್ದಾರೆ.

ಯುವತಿ ಹೇಳಿಕೆ ಬಳಿಕ ನೂತನ ದಂಪತಿಗೆ ರಕ್ಷಣೆ ನೀಡಿ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದ ಹಲವರಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದ ಡಿಕೆಶಿ ರಾಜೀನಾಮೆ ನೀಡಬೇಕು: ಆರ್.ಅಶೋಕ್

Share This Article