ಲವ್ ಕೇಸರಿ ಶಬ್ದ ಚೆನ್ನಾಗಿದೆ: ಪ್ರಮೋದ್ ಮುತಾಲಿಕ್

Public TV
1 Min Read

ಧಾರವಾಡ: ಲವ್ ಕೇಸರಿ ನಮ್ಮ ರಾಜ್ಯದ ಅಭಿಯಾನವಲ್ಲ. ಆದರೆ ಲವ್ ಕೇಸರಿ ಶಬ್ದ ಚೆನ್ನಾಗಿದೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.

ತಲ್ವಾರ್‌ನಿಂದ ಕೊಚ್ಚಿ ಹಾಕುತ್ತೇವೆ ಎಂಬ ರಾಯಚೂರು ಸಂಘಟನೆಯ ಹೇಳಿಕೆ ತಪ್ಪು. ಅದನ್ನು ನಾವು ಒಪ್ಪುವುದಿಲ್ಲ. ಆ ಹೇಳಿಕೆ ಸರಿಯಲ್ಲ ಎಂದ ಮುತಾಲಿಕ್, ಆದರೆ ಲವ್ ಕೇಸರಿ ಸರಿಯಾಗಿದೆ ಎಂದರು. ಇದನ್ನೂ ಓದಿ: ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

ಕಳೆದ 15 ವರ್ಷಗಳಿಂದ ಲವ್ ಜಿಹಾದ್ ವಿರುದ್ಧ ಹೋರಾಡುತ್ತಿದ್ದೇವೆ. ನೂರಕ್ಕೆ ನೂರರಷ್ಟು ಲವ್ ಜಿಹಾದ್ ಇದೆ. ಕೇರಳದಲ್ಲೇ 4,000 ಜನ ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಎರಡುವರೆ ಸಾವಿರ ಕ್ರಿಶ್ಚಿಯನ್ ಹುಡುಗಿಯರು ಲವ್ ಜಿಹಾದ್ ನಲ್ಲಿದ್ದಾರೆ. ಅದು ಈಗ ಸುಪ್ರಿಂಕೋರ್ಟ್ನಲ್ಲಿದೆ ಎಂದರು.

ಲವ್ ಜಿಹಾದ್ ವಿಚಾರವಾಗಿ ಮೂರು ರಾಜ್ಯಗಳಲ್ಲಿ ಕಾನೂನು ರಚನೆಯಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣದಲ್ಲಿ ಕಾನೂನು ಆಗಿದೆ. ಕರ್ನಾಟದಲ್ಲಿಯೂ ಲವ್ ಜಿಹಾದ್ ವಿರುದ್ಧ ಕಾನೂನು ಆಗಬೇಕು ಎಂದರು.

ರಸ್ತೆ ಹೆಸರು ಬದಲಾಗಬೇಕು:
ಈ ವೇಳೆ ರಸ್ತೆ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಮುತಾಲಿಕ್, ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಬ್ರಿಟಿಷರ ಹೆಸರುಗಳಿವೆ. ಅವೆಲ್ಲವನ್ನೂ ಬದಲಾಯಿಸಬೇಕು ಎಂದರು. ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲ್ಲ: ಬೊಮ್ಮಾಯಿ

ವಿಕ್ಟೋರಿಯಾ ರಾಣಿ ಹೆಸರಿವೆ, ಕಬ್ಬನ್ ಪಾರ್ಕ್ ಇದೆ. ಆ ಬ್ರಿಟಿಷರು ಹೋದರೂ ಕಬ್ಬನ್, ವಿಕ್ಟೋರಿಯಾ ಇಲ್ಲೇ ಇದ್ದಾರೆ. ಅವರ ಹೆಸರುಗಳು ಯಾಕೆ? ಕನ್ನಡ ಹೋರಾಟಗಾರರು, ಸಾಹಿತಿ, ಕವಿಗಳ ಹೆಸರಿಡಲಿ ಎಂದರು. ಅವರು ಇಲ್ಲಿಂದ ಹೋಗಿ 75 ವರ್ಷ ಆಗಿ ಹೋಯ್ತಲ್ಲ? ಸ್ವಾಭಿಮಾನ ಇಲ್ಲವಾ? ಘಜ್ನಿ, ಘೋರಿ, ಟಿಪ್ಪು ಸುಲ್ತಾನ್‌ವರೆಗೆ ಹೆಸರು ಬದಲಾಗಬೇಕು. ಕನ್ನಡ ಸಾಹಿತಿ, ಹೋರಾಟಗಾರರ ಹೆಸರಿಡಬೇಕು. ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಮುತಾಲಿಕ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *