ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು, ಮುಸ್ಲಿಂ ಸಂಸ್ಕೃತಿ ಪಾಲಿಸಬೇಕೆಂದು ಒತ್ತಾಯಿಸುತ್ತಿದ್ದ: ಪತ್ನಿ ನೇರ ಆರೋಪ

Public TV
2 Min Read

– ನಾನ್ ವೆಜ್ ತಿನ್ನುವಂತೆ ಪೀಡಿಸುತ್ತಿದ್ದ

ಹುಬ್ಬಳ್ಳಿ: ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿನಿ ದಯವಿಟ್ಟು ರಾಜ್ಯದಲ್ಲಿ ಲವ್ ಜಿಹಾದ್‍ಗೆ ಕಠಿಣ ಕಾನೂನು ತನ್ನಿ. ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಲವ್ ಜಿಹಾದ್‍ಗೆ ಒಳಗಾಗಿ ಹಲ್ಲೆಗೊಳ್ಳಗಾದ ಅಪೂರ್ವ ಅಳಲು ತೋಡಿಕೊಂಡಿದ್ದಾರೆ.

ಪತ್ನಿಯನ್ನು ಪತಿಯೇ ಮನಬಂದಂತೆ ಕೊಚ್ಚಿ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅನ್ಯಧರ್ಮದ ಮದುವೆಯ ಹಿಂದೆ ಲವ್ ಜಿಹಾದ್ ಉದ್ದೇಶ ಅಡಗಿತ್ತೆಂಬ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಲವ್ ಜಿಹಾದ್‍ಗೆ ಒಳಗಾಗಿರುವ ಅಪೂರ್ವ ಪುರಾಣಿಕ ಕೆಲವಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಲವ್ ಜಿಹಾದ್‍ಗೆ ಒಳಗಾಗಿರುವ ಅಪೂರ್ವ ಪುರಾಣಿಕ ಅಲಿಯಾಸ್ ಆರ್ಫಾ ಬಾನು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತೆನೆ, ದಯವಿಟ್ಟು ರಾಜ್ಯದಲ್ಲಿ ಲವ್ ಜಿಹಾದ್‍ಗೆ ಕಠಿಣ ಕಾನೂನು ತೆಗೆದುಕೊಂಡು ಬನ್ನಿ. ಎಷ್ಟು ಅಮಾಯಕ ಹೆಣ್ಣು ಮಕ್ಕಳು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆಂದು ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಇದನ್ನು ದುರುಪಯೋಗ ಪಡಿಸಿಕೊಂಡು ಆತ ನನ್ನ ಮೇಲೆ ಅತ್ಯಾಚಾರ ಎಸಗಿದನು. ಅತ್ಯಾಚಾರದ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ. ತಾಯಿ ಮತ್ತಿತರರಿಗೆ ಹೇಳಿ, ವಿಡಿಯೋ ಬಹಿರಂಗಪಡಿಸೋದಾಗಿ ಎಚ್ಚರಿಸಿದನು.

ಅನಿವಾರ್ಯವಾಗಿ ನಾನು ಮದುವೆಯಾಗೋಕೆ ಒಪ್ಪಿಕೊಂಡೆ. ಮದುವೆಯಾಗ್ತಿದ್ದಂತೆಯೇ ಹಿಜಜ್ ತನ್ನ ಮತ್ತೊಂದು ಮುಖ ತೋರಿಸಲಾರಂಭಿಸಿದೆ. ತನ್ನ ಧರ್ಮಕ್ಕೆ ಧರ್ಮಾಂತರ ಮಾಡಿಕೊಂಡರಷ್ಟೇ ಸಂಸಾರ ಮಾಡ್ತೇನೆ ಎಂದು ಹೇಳಿದ್ದನು. ಅನಿವಾರ್ಯವಾಗಿ ನಾನು ಧರ್ಮಾಂತರಗೊಂಡೆ. ಆದರೆ ಬುರ್ಕಾ ಹಾಕಬೇಕು, ಹಿಜಬ್ ಹಾಕಿಕೊಳ್ಳಬೇಕೆಂದು ಪೀಡಿಸುತ್ತಿದ್ದನು. ಮುಸ್ಲಿಂ ಜನರಿರುವ ಓಣಿಗೆ ಕರೆದ್ದೋಯ್ದು ಅವರ ಸಂಸ್ಕೃತ ಪಾಲಿಸುವಂತೆ ಒತ್ತಾಯಿಸಿದನು ಎಂದಿದ್ದಾನೆ. ಇದನ್ನೂ ಓದಿ: ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

ನನ್ನ ಹೆಸರನ್ನು ಅರ್ಫಾ ಬಾನು ಎಂದೂ ಬದಲಾಯಿಸಿದನು. ನಿತ್ಯ ನಮಾಜ್ ಮಾಡುವಂತೆ ಒತ್ತಾಯಿಸುವುದರ ಜೊತೆಗೆ ನಾನ್ ವೆಜ್ ತಿನ್ನುವಂತೆ ಪೀಡಿಸುತ್ತಿದ್ದನು.ಮಗು ಹುಟ್ಟಿದ ನಂತರ ಅವನಿಗೂ ನಾನ್ ವೆಜ್ ಬಾಯಲ್ಲಿ ಇಟ್ಟು ತಿನ್ನುವಂತೆ ಪೀಡಿಸ್ತಿದ್ದನು. ನಿತ್ಯ ಕಿರುಕುಳ ಕೊಟ್ಟರೂ ಹೇಗೋ ಸಂಸಾರ ನಡೆಸುತ್ತಿದ್ದೆ. ಆದರೆ ಅವನಿಗೆ ಇನ್ನೊಂದು ಮದುವೆಯಾಗಿ ಮೂವರು ಮಕ್ಕಳಿರೋದು ನನ್ನ ಗಮನಕ್ಕೆ ಬಂತು. ತನ್ನ ಧರ್ಮೀಯಳನ್ನೇ ಪ್ರೀತಿಸೋ ನಾಟಕವಾಡಿ ಮದುವೆಯಾಗಿದ್ದು ತಿಳಿಯಿತು. ಇದಾದ ನಂತರ ನಾನು ಡೈವರ್ಸ್‍ಗೆ ಅಪ್ಲೈ ಮಾಡಿದೆ. ಇಷ್ಟರಲ್ಲಿಯೇ ಕೋರ್ಟ್‌ನಲ್ಲಿ ವಿಚಾರಣೆಗೆ ಬರೋದಿತ್ತು. ಆದರೆ ಅದಕ್ಕೂ ಮುಂಚಿತವಾಗಿಯೇ ನನ್ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

ಇದೆಲ್ಲವನ್ನೂ ನೋಡಿದಾಗ ಲವ್ ಜಿಹಾದ್ ದುರುದ್ದೇಶ ಇಟ್ಟುಕೊಂಡಿದ್ದ ಅನಿಸುತ್ತದೆ. ಬೇರೆ ಹೆಣ್ಣುಗಳ ಜೊತೆ ಚೆಲ್ಲಾಟವಾಡೋ ಇಂಥವನಿಗೆ ಕಠಿಣ ಶಿಕ್ಷೆಯಾಗಬೇಕು. ಆತನನ್ನು ಜೈಲಿನಿಂದ ಬಿಟ್ಟರೆ ನನಗೆ, ನನ್ನ ಮಗ ಮತ್ತು ತಾಯಿಗ ಜೀವ ಭಯಯಿದೆ. ಹೀಗಾಗಿ ಅವನನ್ನು ಜೈಲಿನಿಂದ ಹೊರಗೆ ಬಿಡದೆ, ಗಲ್ಲಿಗೇರಿಸಬೇಕೆಂದ ಅಪೂರ್ವ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *