ಲವ್‌ ಜಿಹಾದ್‌ ಹೆಚ್ಚಾಗುತ್ತಿದೆ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಪೋಷಕರಲ್ಲಿ ನೇಹಾ ತಂದೆ ನಿರಂಜನ್‌ ಮನವಿ

Public TV
1 Min Read

ಧಾರವಾಡ: ಲವ್‌ ಜಿಹಾದ್‌ (Love Jihad) ಹೆಚ್ಚಾಗುತ್ತಿದೆ. ನಿಮ್ಮ ಮಕ್ಕಳನ್ನು ನೀವು ರಕ್ಷಿಸಿಕೊಳ್ಳಿ ಎಂದು ಮೃತ ನೇಹಾ ತಂದೆ (Neha Hiremath), ಕಾಂಗ್ರೆಸ್​ ಕಾರ್ಪೊರೇಟರ್​ ನಿರಂಜನ್​ ಹಿರೇಮಠ (Niranjan Hiremath) ಮನವಿ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಅನೇಕ ಕಡೆ ನೋಡಿದಾಗ ಕ್ರೂರತನ ಜಾಸ್ತಿ ಆಗುತ್ತಿದೆ. ಈ ರೀತಿಯ ಮನಸ್ಥಿತಿ ಹೆಚ್ಚಾಗುತ್ತಿದೆ ಯಾಕೆ? ಮತ್ತೊಬ್ಬ ಬಡ ಪೋಷಕರ  ಹೆಣ್ಣು ಮಕ್ಕಳು ಈ ರೀತಿ ಆಗಬಾರದಲ್ಲ. ಲವ್‌ ಜಿಹಾದ್‌ ಬಹಳ ವಿಸ್ತಾರವಾಗಿ ಹೋಗುತ್ತಿದೆ ಅಂತ ನನಗೂ ಅನಿಸುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿರೋದು: ಸಿಎಂ

 

ನನಗೆ ಒಬ್ಬಳೇ ಮಗಳು. 25 ವರ್ಷದಿಂದ ನಾನು ಒಂದು ದಿವಸ ಕಣ್ಣಿರು ಹಾಕಿಲ್ಲ. ಇವತ್ತು ನನ್ನ ಮನೆಗೆ ಈ ರೀತಿ ಆಗಿದೆ. ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ ಹೇಳುತ್ತಿದ್ದೇನೆ. ತಮ್ಮ ಮಗಳು ಏನು ಮಾಡುತ್ತಾಳೆ? ಅವಳ ಹಿಂದೆ ಯಾರಿದ್ದಾರೆ ಎಂಬುದನ್ನು ನೀವುಕೂಡ ಗಮನ ಹರಿಸಬೇಕು. ನನ್ನ ಮಗಳಿಗೆ ಆದಂತೆ ಇನ್ನೊಬ್ಬರ ಮಗಳಿಗೆ ಈ ರೀತಿ ಆಗಬಾರದು ಎಂದರು. ಇದನ್ನೂ ಓದಿ: ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.. ಲವ್ ಜಿಹಾದ್ ನನಗೆ ಕಾಣುತ್ತಿಲ್ಲ: ಹುಬ್ಬಳ್ಳಿ ಕೊಲೆ ಬಗ್ಗೆ ಪರಮೇಶ್ವರ್ ಹೇಳಿಕೆ

ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಜೊತೆ ಕೇಳಿಕೊಳ್ಳುತ್ತೇನೆ. ಹೆಣ್ಣು ಮಕ್ಕಳು ಕಲಿಯಬೇಕು. ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ. ಈ ರೀತಿ ಆದರೆ ಕಾಲೇಜಿಗೆ ಹೋಗಲು ಹೇಗೆ ಧೈರ್ಯ ಬರುತ್ತೆ ಎಂದು ಪ್ರಶ್ನಿಸಿದರು.

Share This Article