ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ – ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್

Public TV
2 Min Read

– ಮೊದಲ ಭೇಟಿಯಲ್ಲೇ ಮೋಡಿ ಮಾಡಿ ಲವ್ವರ್‌ನ ರೂಮ್‌ಗೆ ಕರೆದುಕೊಂಡು ಹೋಗಿದ್ದ ವಂಚಕ

ಬೆಂಗಳೂರು: ಪ್ರೀತಿಸಿ, ಮದುವೆಯಾಗ್ತೀನಿ ಎಂದು ನಂಬಿಸಿ ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಆರೋಪಿಯನ್ನು ಮೊಹಮದ್ ಇಶಾಕ್ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ (HSR Layout) ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.

ಭೇಟಿಯಾದ ದಿನವೇ ದಾಸರಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಯುವತಿಯನ್ನು ಕರೆದುಕೊಂಡು ಹೋಗಿದ್ದ. ಮದುವೆ ಆಗ್ತೀನಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ಸ್ವಲ್ಪ ದಿನಗಳ ನಂತರ ಆತನಿಗೆ ಬೇರೆ ಬೇರೆ ಹುಡುಗಿಯರ ಸಹವಾಸ ಇರೋದು ಯುವತಿಗೆ ತಿಳಿದು, ಆತನಿಗೆ ಪ್ರಶ್ನೆ ಮಾಡಿದ್ದಳು. ಇದೆಲ್ಲ ಆದ ನಂತರ 2025ರ ಸೆ.14ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿ ಆತನನ್ನು ಪ್ರಶ್ನೆ ಮಾಡಿದಾಗ, ನಿನ್ನ ದಾರಿ ನೀನು ನೋಡ್ಕೋ ಎಂದು ಹೇಳಿದ್ದ ಅಂತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವು ತೋಡಿಕೊಂಡಿದ್ದಾಳೆ.

ಸದ್ಯ ಈ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

Share This Article