ಜಾಕ್ವೆಲಿನ್ ಮೇಲೆ ಮತ್ತೆ ಲವ್? : ಜೈಲಿನಿಂದಲೇ ಸಂದೇಶ ಕಳುಹಿಸಿದ ಸುಕೇಶ್

Public TV
1 Min Read

ಹುಕೋಟಿ ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಲ್ಲಿದ್ದುಕೊಂಡೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಪರ ಬ್ಯಾಟ್ ಮಾಡುತ್ತಿದ್ದಾನೆ. ಮೊನ್ನೆಯಷ್ಟೇ ಕೋರ್ಟಿಗೆ ಬಂದಿದ್ದ ಸುಕೇಶ್, ನಟಿಯ ಬಗ್ಗೆ ಅಚ್ಚರಿ ಎನ್ನುವಂತಹ ಮಾತುಗಳನ್ನು ಆಡಿದ್ದಾನೆ. ತನ್ನ ಮೇಲಿರುವ ಆರೋಪಕ್ಕೂ ಜಾಕ್ವೆಲಿನ್ ಗೂ ಯಾವುದೇ ಸಂಬಂಧವಿಲ್ಲ. ಆಕೆ ಅಮಾಯಕಿ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾನೆ.

ಕೋರ್ಟಿನಲ್ಲಿ ಜಾಕ್ವೆಲಿನ್ ಪರ ಮಾತನಾಡಿದ್ದ ಸುಕೇಶ್, ಆಚೆ ಬಂದ ನಂತರ ಪ್ರೇಮಿಗಳ ದಿನಕ್ಕೆ ಆ ನಟಿಗೆ ಶುಭಾಶಯ ಕೋರಿದ್ದ. ಜಾಕ್ವೆಲಿನ್ ತುಂಬಾ ಒಳ್ಳೆಯ ಹುಡುಗಿ. ಆಕೆ ಯಾವ ತಪ್ಪು ಮಾಡಿಲ್ಲ. ಆಕೆಯ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಅದಲ್ಲೆವನ್ನೂ ಎದುರಿಸುವ ಶಕ್ತಿ ಆಕೆಗೆ ಇದೆ ಎಂದು ಹೊಗಳಿದ್ದ. ಈ ಕೇಸ್ ನಲ್ಲಿ ಆಕೆ ಗೆದ್ದು ಬರುತ್ತಾಳೆ ಎನ್ನುವ ವಿಶ್ವಾಸವನ್ನೂ ವ್ಯಕ್ತ ಪಡಿಸಿದ್ದ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

ಇದೀಗ ಜೈಲಿನಿಂದ ಮತ್ತೊಂದು ಸಂದೇಶವನ್ನು ಸುಕೇಶ್ ಕಳುಹಿಸಿದ್ದಾನೆ. ‘ಮುಂದಿನ ವರ್ಷ ನಾನು ಚುನಾವಣೆಗೆ ನಿಲ್ಲುತ್ತೇನೆ. ನಾನು ನಿನ್ನನ್ನು ರಕ್ಷಿಸುತ್ತೇನೆ’ ಎಂದು ಅಭಯ ನೀಡಿದ್ದಾನೆ. ಸುಕೇಶ್ ಪ್ರಕರಣದಿಂದಾಗಿ ಜಾಕ್ವೆಲಿನ್ ಕೂಡ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಕೋರ್ಟಿಗೂ ಅಲೆದಾಡುತ್ತಿದ್ದಾರೆ. ಅಲ್ಲದೇ, ಹಲವು ರೀತಿಯಲ್ಲೂ ಅವಮಾನ ಎದುರಿಸಿದ್ದಾರೆ. ಅಲ್ಲದೇ, ಸುಕೇಶ್ ವಿರುದ್ಧವೇ ಅವರು ಮಾತನಾಡಿದ್ದಾರೆ. ಆದರೂ, ಸುಕೇಶ್ ಜೈಲಿನಿಂದಲೇ ಜಾಕ್ವೆಲಿನ್ ಪರ ಮಾತನಾಡಿದ್ದಾನೆ.

ಜಾಕ್ವೆಲಿನ್   ಮತ್ತು ಸುಕೇಶ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಕಾರಣಕ್ಕಾಗಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬಂದಿತ್ತು. ಜಾರಿ ನಿರ್ದೇಶನಾಲಯವು ಜಾಕ್ಲಿನ್ ಮೇಲೆಯೂ ಆರೋಪ ಮಾಡಿತ್ತು. ತನಿಖೆಯನ್ನೂ ನಡೆಸಿತ್ತು. ನಿರಂತರವಾಗಿ ಇಬ್ಬರ ಮೇಲೂ ತನಿಖೆ ನಡೆದಿದೆ. ಹೀಗಾಗಿ ಜಾಕ್ವೆಲಿನ್ ಪರ ಸುಕೇಶ್ ನಿಂತುಕೊಂಡಿದ್ದಾನೆ.

Share This Article
1 Comment

Leave a Reply

Your email address will not be published. Required fields are marked *